ಮಂಗಳವಾರ, ಫೆಬ್ರವರಿ 18, 2020
26 °C

ಅಂಗವೈಕಲ್ಯ ಹೊಂದಿದ್ದ ಸ್ನೇಹಿತೆಗೆ ನೆರವಾದ ಬಾಲಕನಿಗೆ ಪ್ರಶಂಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಶಿರಸಿ: ಬಹುವಿಧದ ಅಂಗವೈಕಲ್ಯ ಹೊಂದಿದ್ದ ಸ್ನೇಹಿತೆಯನ್ನು ನಿತ್ಯ ಶಾಲೆಗೆ ಕರೆದುಕೊಂಡು ಬಂದು ಕಾಯಕನಿಷ್ಠೆ ತೋರಿದ್ದ ಬಾಲಕನಿಗೆ ಹಿರಿಯ ಅಧಿಕಾರಿಯೊಬ್ಬರು ಬೆನ್ನುತಟ್ಟಿದ್ದಾರೆ.

ತಾಲ್ಲೂಕಿನ ತಿಗಣಿ ಹಿರಿಯ ಪ್ರಾಥಮಿಕ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ನಿರಂಜನ ಕಬ್ಬೇರ್ ನಿತ್ಯ ಶಾಲೆಗೆ ಬರುವಾಗ, ಬೆನ್ನುಹುರಿ, ಕಾಲಿನ ತೊಂದರೆ ಅನುಭವಿಸುತ್ತಿದ್ದ ಸ್ನೇಹಿತೆ ಪ್ರಾರ್ಥನಾ ಗೌಡಳ ಸ್ಕೂಲ್ ಬ್ಯಾಗ್ ಹೊತ್ತುಕೊಂಡು ಅವಳನ್ನು ನಡೆಸಿಕೊಂಡು ಶಾಲೆಗೆ ಕರೆತರುತ್ತಿದ್ದ. ಆಕೆ ಮೂರನೇ ತರಗತಿಯಲ್ಲಿರುವಾಗಿನಿಂದ ಈ ಕಾಯಕವನ್ನು ನಿತ್ಯವೂ ವ್ರತದಂತೆ ಪಾಲಿಸುತ್ತಿದ್ದ ಆತ, ಒಂದು ವರ್ಷದ ಹಿಂದೆ ಪ್ರಾರ್ಥನಾ ಅಸುನೀಗುವವರೆಗೂ ಇದನ್ನು ಮುಂದುವರಿಸಿದ್ದ.

’ಪ್ರಜಾವಾಣಿ’ ಕಳೆದ ನವೆಂಬರ್ 14, ಮಕ್ಕಳ ದಿನಾಚರಣೆಯಂದು ‘ಬಣ್ಣದ ಚಿಟ್ಟೆ’ ಶೀರ್ಷಿಕೆಯಡಿ, ಪರಿಚಯಿಸಿದ ಸಾಧಕ ಮಕ್ಕಳಲ್ಲಿ ನಿರಂಜನ ಕೂಡ ಒಬ್ಬನಾಗಿದ್ದ. ಈ ವರದಿ ಓದಿದ್ದ ಸಮಗ್ರ ಶಿಕ್ಷಣ ಕರ್ನಾಟಕದ ಕಾರ್ಯಕ್ರಮ ನಿರ್ದೇಶಕ ಕೆ.ರಾಜು ಮೊಗವೀರ ಅವರು, ವಿದ್ಯಾರ್ಥಿಯಲ್ಲಿರುವ ಮಾನವೀಯ ಮೌಲ್ಯವನ್ನು ಗುರುತಿಸಿ, ಆತನಿಗೆ ಪ್ರಶಂಸಾ ಪತ್ರ ಹಾಗೂ ₹3000 ಮೊತ್ತದ ಠೇವಣಿಪತ್ರವನ್ನು ಕಳುಹಿಸಿಕೊಟ್ಟಿದ್ದರು.

ಭಾನುವಾರ ತಿಗಣಿ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬನವಾಸಿಯ ಹಿರಿಯರಾದ ಟಿ.ಜಿ.ನಾಡಿಗೇರ ಅವರು ಪ್ರಶಂಸಾ ಪತ್ರವನ್ನು ನಿರಂಜನನಿಗೆ ವಿತರಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ವನಿತಾ ನಾಯಕ, ಶಿಕ್ಷಕ ಮಾರುತಿ ಉಪ್ಪಾರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು