ಅಂಕೋಲಾ ತಾಲ್ಲೂಕಿನ ಅಡ್ಲೂರು ಬಳಿ ಅಪಘಾತ: ಒಬ್ಬ ಸಾವು

ಸೋಮವಾರ, ಏಪ್ರಿಲ್ 22, 2019
31 °C

ಅಂಕೋಲಾ ತಾಲ್ಲೂಕಿನ ಅಡ್ಲೂರು ಬಳಿ ಅಪಘಾತ: ಒಬ್ಬ ಸಾವು

Published:
Updated:
Prajavani

ಅಂಕೋಲಾ: ತಾಲ್ಲೂಕಿನ ಅಡ್ಲೂರು ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸೋಮವಾರ ಟಾಟಾ ಏಸ್ ಮತ್ತು ಕಾರಿನ ನಡುವೆ ನಡೆದ  ಅಪಘಾತದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಒಂಬತ್ತು ಜನರಿಗೆ ಗಾಯಗಳಾಗಿವೆ.

ಟಾಟಾ ಏಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅಗಸೂರು ಗ್ರಾಮದ ವಿಷ್ಣು ನಾರಾಯಣ ನಾಯ್ಕ (65) ಮೃತರು. ಅದೇ ಗ್ರಾಮದವರಾದ  ನೇತ್ರಾವತಿ ಬೊಮ್ಮಯ್ಯ ಹರಿಕಂತ್ರ, ಬುಡ್ಡಿ ಲಕ್ಕು ಗೌಡ, ಮಂಗಳಾ ನಾರಾಯಣ ಗೌಡ, ಲಕ್ಷ್ಮೀ ಪರಮೇಶ್ವರ ನಾಯಕ, ಸುಜಾತಾ ಸತೀಶ ನಾಯಕ, ನಾಗಮ್ಮ ವೆಂಕಪ್ಪ ಗೌಡ, ಏಸ್ ಚಾಲಕ ಗಿರೀಶ ಶಾಂಬಾ ಬಂಟ ಹಾಗೂ ಕಾರು ಚಾಲಕ ಮಹಾಂತೇಶ ವೆಂಕಟೇಶ ಗೌಡ, ವಿವೇಕ ಶಿವಾನಂದ ನಾಯಕ ಗಾಯಗೊಂಡವರು.

ಟಾಟಾ ಏಸ್ ಅಂಕೋಲಾದಿಂದ ಹೊನ್ನಳ್ಳಿಯತ್ತ, ಕಾರು ಅಗಸೂರಿನಿಂದ ಅಂಕೋಲಾದತ್ತ ಬರುತ್ತಿದ್ದವು. ಗಾಯಾಳುಗಳನ್ನು ತಾಲ್ಲೂಕು ಆಸ್ಪತ್ರೆಗೆ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಿರೀಶ ಶಾಂಬಾ ಬಂಟ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಸಿಪಿಐ ಬಿ.ಪ್ರಮೋದಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !