ಶುಕ್ರವಾರ, ಅಕ್ಟೋಬರ್ 23, 2020
21 °C

ಕಾರು– ಲಾರಿ ಮುಖಾಮುಖಿ ಡಿಕ್ಕಿ: ಒಬ್ಬ ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಮಟಾ: ತಾಲ್ಲೂಕಿನ ತಂಡ್ರಕುಳಿ ಕ್ರಾಸ್ ಬಳಿ ಶನಿವಾರ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಕಾರು ಚಲಾಯಿಸುತ್ತಿದ್ದ, ಉಡುಪಿ ಜಿಲ್ಲೆ ಕುಂದಾಪುರದ ಮಂಜುನಾಥ ಆಚಾರಿ (30) ಮೃತರು. ಅವರೊಂದಿಗೆ ಕಾರಿನಲ್ಲಿದ್ದ ಬೈಂದೂರು ಶಿರೂರಿನ ರವಿಕಾಂತ ಕೃಷ್ಣ ಆಚಾರಿ (32) ಗಂಭೀರವಾಗಗಿ ಗಾಯಗೊಂಡಿದ್ದಾರೆ. ಅವರಿಗೆ ಕುಮಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಕಾರು ಅಂಕೋಲಾ ಕಡೆಯಿಂದ ಕುಂದಾಪುರದತ್ತ ಹೋಗುತ್ತಿತ್ತು. ಅನಾನಸ್ ಸಾಗಿಸುತ್ತಿದ್ದ ಲಾರಿಯುವ ಕುಮಟಾದಿಂದ ಅಂಕೋಲಾದತ್ತ ಪ್ರಯಾಣಿಸುತ್ತಿತ್ತು. ಸ್ಥಳಕ್ಕೆ ಭೇಟಿ ನೀಡಿದ ಕುಮಟಾ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು