ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಭವಿಷ್ಯದ ಆತಂಕದಲ್ಲಿ ಪ್ರಶಸ್ತಿಯ ಸಂಭ್ರಮ

Last Updated 5 ಸೆಪ್ಟೆಂಬರ್ 2020, 7:54 IST
ಅಕ್ಷರ ಗಾತ್ರ

ಕಾರವಾರ: ಯಕ್ಷಗಾನ ಕಲಾವಿದ, ಅರ್ಥದಾರಿ ಅಂಕೋಲಾದ ನಾಡುಮಾಸ್ಕೇರಿಯ ಡಾ. ರಾಮಕೃಷ್ಣ ಗುಂದಿ ಅವರಿಗೆ 2019ನೇ ಸಾಲಿನ ‘ಪಾರ್ತಿಸುಬ್ಬ ಪ್ರಶಸ್ತಿ’ ಗೌರವ ಪ್ರಶಸ್ತಿ ಪ್ರಕಟವಾಗಿದೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ‘ಪ್ರಶಸ್ತಿಗೆ ನನ್ನನ್ನು ಪರಿಗಣಿಸಿದ್ದು ನನ್ನ ವಿದ್ಯಾರ್ಥಿಯೊಬ್ಬ ಕರೆ ಮಾಡಿ ಹೇಳಿದ ಬಳಿಕವೇ ತಿಳಿಯಿತು. ನಾನೇ ಸದಸ್ಯನಾಗಿ ಕೆಲಸ ಮಾಡಿದ ಅಕಾಡೆಮಿಯು ನನ್ನನ್ನು ಗೌರವಿಸುತ್ತಿರುವುದು ಖುಷಿಯಾಗಿದೆ. ಸುಮಾರು 12 ವರ್ಷಗಳ ಯಕ್ಷಗಾನ ಅಕಾಡೆಮಿಯವರು ಹಿಂದೆ ನನ್ನ ಬಗ್ಗೆ ಸಿ.ಡಿ ಮಾಡಿದ್ದರು’ ಎಂದರು.

‘ಈಗ ಕೊರೊನಾ ಕಾಲದಲ್ಲಿ ಪ್ರಶಸ್ತಿ ಸ್ವೀಕರಿಸಬೇಕಿದೆ. ವೈರಸ್ ಮತ್ತು ಅದರಿಂದ ದೇಶದ ಮೇಲಾದ ಪರಿಣಾಮವು ಯಕ್ಷಗಾನ ಕ್ಷೇತ್ರಕ್ಕೂ ಆಗಿದೆ. ತಾರಾ ಪಟ್ಟದಲ್ಲಿದ್ದ ಕಲಾವಿದರೂ ಈಗ ಅವಕಾಶಕ್ಕಾಗಿ ಹುಡುಕುವಂತಾಗಿದೆ. ಭವಿಷ್ಯದಲ್ಲಿ ಏನಾಗಲಿದೆ ಎಂಬುದು ಎಂದು ಗೊತ್ತಾಗುತ್ತಿಲ್ಲ’ ಎಂದು ಇದೇವೇಳೆ ಕಳವಳ ವ್ಯಕ್ತಪಡಿಸಿದರು.

‘ಅಕಾಡೆಮಿಗಳಿಗೆ ಸರ್ಕಾರ ಅನುದಾನ ಕಡಿತ ಮಾಡಿದೆ. ಮನೆಯಲ್ಲಿ ಕೃಷಿ ಅಥವಾ ಮತ್ಯಾವುದೋ ಉದ್ಯೋಗ ಇದ್ದವರಾದರೆ ಅಷ್ಟಾಗಿ ಸಮಸ್ಯೆಯಿಲ್ಲ. ಆದರೆ, ಜೀವನೋಪಾಯಕ್ಕಾಗಿ ಕಲೆಯನ್ನೇ ನಂಬಿಕೊಂಡಿರುವವರಿಗೆ ಭಾರಿ ತೊಂದರೆಯಾಗಿದೆ. ಸರ್ಕಾರ ಮುಂದೆ ಯಾವ ರೀತಿ ಸಹಾಯಕ್ಕೆ ನಿಲ್ಲುತ್ತದೆ ಎಂದು ನೋಡಬೇಕು. ಪ್ರಶಸ್ತಿ ಪ್ರಕಟವಾಗಿರುವ ಈ ಖುಷಿಯ ನಡುವೆಯೂ ಆತಂಕಕಾರಿ ಸಂದರ್ಭದ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT