ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲ್ಯಾಬ್‍ಗೆ ಬಂತು ‘ಆರ್‌ಟಿಪಿಸಿಆರ್ ಯಂತ್ರ’

ಹದಿನೈದು ದಿನದೊಳಗೆ ಪ್ರಯೋಗಾಲಯ ಕಾರ್ಯಾರಂಭದ ಭರವಸೆ
Last Updated 17 ಆಗಸ್ಟ್ 2021, 16:45 IST
ಅಕ್ಷರ ಗಾತ್ರ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಏಳು ತಾಲ್ಲೂಕುಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಶಿರಸಿಯಲ್ಲಿ ಕೋವಿಡ್ ಲ್ಯಾಬ್ ಸ್ಥಾಪನೆಗೆ ಅಂತಿಮ ಹಂತದ ಸಿದ್ಧತೆ ವೇಗ ಪಡೆದುಕೊಂಡಿದ್ದು, ಸೋಮವಾರ ಸಂಜೆ ಎರಡು ಆರ್.ಟಿ.ಪಿ.ಸಿ.ಆರ್. ಯಂತ್ರ ಪೂರೈಕೆ ಆಗಿದೆ.

ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣಗೊಂಡಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹಿಂಬದಿಯಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಸಿವಿಲ್ ಕೆಲಸ ಮಾತ್ರ ಮುಗಿಸಲಾಗಿತ್ತು. ಅಗತ್ಯ ಯಂತ್ರೋಪಕರಣಗಳ ಪೂರೈಕೆಗೆ ವಿಳಂಬವಾಗಿತ್ತು.

ಈ ಕುರಿತು ‘ಭರವಸೆಗೆ ಸೀಮಿತವಾದ ಕೋವಿಡ್ ಲ್ಯಾಬ್’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಆ.13 ರಂದು ವರದಿ ಪ್ರಕಟಿಸಿತ್ತು. ಆ ಬಳಿಕ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಆರ್.ಟಿ.ಪಿ.ಸಿ.ಆರ್ ಯಂತ್ರ ಸೇರಿದಂತೆ ಲ್ಯಾಬ್‍ಗೆ ಅಗತ್ಯವಿರುವ ಸೌಕರ್ಯ ಒದಗಿಸುವ ಕುರಿತು ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಇಲಾಖೆ ಪ್ರಯೋಗಾಲಯ ಕೆಲಸ ಪೂರ್ಣಗೊಳಿಸಲು ತ್ವರಿತ ಸಿದ್ಧತೆ ನಡೆಸಲಾರಂಭಿಸಿದೆ.

‘ಕೋವಿಡ್ ಲ್ಯಾಬ್ ಆದಷ್ಟು ಶೀಘ್ರ ಕಾರ್ಯಾರಂಭಿಸುವ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯಿಸಿದರು.

‘ನಾಲ್ಕೈದು ದಿನದೊಳಗೆ ಆರ್.ಎನ್.ಎ.ಎಕ್ಸಟ್ರಾಕ್ಟರ್ ಯಂತ್ರ ಬರಲಿದೆ. ಆ ಬಳಿಕ ಪ್ರಯೋಗಾಲಯದಲ್ಲಿ ತಾಂತ್ರಿಕ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಐ.ಸಿ.ಎಂ.ಆರ್. ಮಾರ್ಗಸೂಚಿ ಆಧರಿಸಿ, ಅಂತಿಮ ಅನುಮತಿ ಪಡೆದ ಬಳಿಕ ಕೋವಿಡ್ ಪತ್ತೆ ಕೆಲಸ ಆರಂಭಗೊಳ್ಳುತ್ತದೆ. ಮುಂದಿನ ಹದಿನೈದು ದಿನದೊಳಗೆ ಇದು ಸಾಧ್ಯವಾಗುವ ಗುರಿ ಇಟ್ಟುಕೊಂಡಿದ್ದೇವೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT