ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಡಿಸಿಸಿ: ₹6.28 ಕೋಟಿ ವಿಮಾ ಮೊತ್ತ ಬಿಡುಗಡೆ

ರೈತರಿಗೆ ನೆರವಾದ ಪಿಎಂ ಫಸಲ್ ಬಿಮಾ ಯೋಜನೆ
Last Updated 27 ಜೂನ್ 2022, 13:13 IST
ಅಕ್ಷರ ಗಾತ್ರ

ಶಿರಸಿ: 2021–22ನೇ ಸಾಲಿನ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿ ಜಿಲ್ಲೆಯ ಭತ್ತ ಮತ್ತು ಮೆಕ್ಕೆಜೋಳ ಕ್ಷೇತ್ರಕ್ಕೆ ₹6.28 ಕೋಟಿ ವಿಮಾ ಮೊತ್ತ ಬಿಡುಗಡೆಯಾಗಿದೆ. ಈ ಮೊತ್ತ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಮೂಲಕ ಆಧಾರ್ ಜೋಡಣೆಯಾದ ರೈತರ ಖಾತೆಗೆ ಜಮಾ ಆಗಿದೆ.

ಕಳೆದ ಸಾಲಿನಲ್ಲಿ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಭತ್ತ, ಮೆಕ್ಕೆಜೋಳ ಕ್ಷೇತ್ರಕ್ಕೆ ಹಾನಿ ಉಂಟಾಗಿದ್ದವು. ಫಸಲು ಕೈಗೆ ಸಿಗುವ ಹೊತ್ತಲ್ಲಿಯೂ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾಗಿತ್ತು.

‘ಭತ್ತ ಮತ್ತು ಮೆಕ್ಕೆಜೋಳದ ಕ್ಷೇತ್ರಕ್ಕೆ ಸಂಬಂಧಿಸಿ ಬ್ಯಾಂಕ್ ಹಾಗೂ ಸಹಕಾರ ಸಂಘಗಳ ಮೂಲಕ 75,651 ಪ್ರಸ್ತಾವ ಬೆಳೆವಿಮೆಗೆ ಸಲ್ಲಿಕೆಯಾಗಿತ್ತು. ಈ ಪೈಕಿ ರೈತರು ಹೊಂದಿರುವ 15,446 ಸರ್ವೆ ನಂಬರ್ ಗಳ ಜಮೀನುಗಳಿಗೆ ವಿಮಾ ಪರಿಹಾರ ಮೊತ್ತ ನೇರವಾಗಿ ಆಧಾರ ಲಿಂಕ್ ಆದ ರೈತರ ಉಳಿತಾಯ ಖಾತೆಗೆ ಜಮಾ ಆಗಿದೆ’ ಎಂದು ಕೆಡಿಸಿಸಿ ಬ್ಯಾಂಕ್ ಪ್ರಕಟಣೆ ತಿಳಿಸಿದೆ.

‘ಬೆಳೆಯ ಕಟಾವಿನ ನಂತರ ಉಂಟಾದ ಸ್ಥಳೀಯ ವಿಪತ್ತಿಗೆ ಸಂಬಂಧಿಸಿ ರೈತರು ಸಲ್ಲಿಸಿದ ಪ್ರಸ್ತಾವನೆಗೆ ಅನುಸಾರವಾಗಿ ₹3.89 ಕೋಟಿ ವಿಮಾ ಪರಿಹಾರ ಬಿಡುಗಡೆಯಾಗಿದೆ. ಒಟ್ಟೂ 17,516 ಪ್ರಸ್ತಾವ ಸಲ್ಲಿಕೆಯಾಗಿದ್ದವು’ ಎಂದು ಬ್ಯಾಂಕ್ ತಿಳಿಸಿದೆ.

ವಿಮಾ ಕಂತು ಪಾವತಿಗೆ ಗಡುವು:

2022–23ನೇ ಸಾಲಿನ ಫಸಲ್ ಬಿಮಾ ಯೋಜನೆ ಅಡಿ ಕಾಳುಮೆಣಸು ಬೆಳೆ ಕ್ಷೇತ್ರಕ್ಕೆ ಸಂಬಂಧಿಸಿ ಜೂ.30, ಹತ್ತಿ ಮತ್ತು ಮೆಕ್ಕೆಜೋಳದ ಕ್ಷೇತ್ರಕ್ಕೆ ಸಂಬಂಧಿಸಿ ಜು.31 ಹಾಗೂ ಭತ್ತ ಕ್ಷೇತ್ರಕ್ಕೆ ಆ.16ರ ಒಳಗೆ ಬೆಳೆವಿಮೆ ಪ್ರೀಮಿಯಂ ಪಾವತಿಸಲು ಕೊನೆಯ ದಿನಾಂಕವಾಗಿದೆ. ಜಿಲ್ಲೆಯ ರೈತರು ಇದರ ಪ್ರಯೋಜನ ಪಡೆಯುವುದರೊಂದಿಗೆ ಬೆಳೆವಿಮಾ ಯೋಜನೆಯ ವ್ಯಾಪ್ತಿಯಡಿಯಲ್ಲಿ ಪಾಲ್ಗೊಳ್ಳುವಂತೆ ಕೆಡಿಸಿಸಿ ಬ್ಯಾಂಕ್ ತಿಳಿಸಿದೆ. ಉಳಿತಾಯ ಖಾತೆಗೆ ಆಧಾರ ಜೋಡಣೆ ಮಾಡದ ರೈತರು ತಮ್ಮ ಉಳಿತಾಯ ಖಾತೆಗೆ ಆಧಾರ ಸಂಖ್ಯೆ ಜೋಡಣೆ ಮಾಡಿಸಲು ಸೂಚಿಸಿದೆ.

––––––––––––

ಸಂಕಷ್ಟದಲ್ಲಿದ್ದ ರೈತಾಪಿ ವರ್ಗಕ್ಕೆ ಬೆಳೆ ವಿಮಾ ಯೋಜನೆ ವರದಾನವಾಗಿದೆ. ಈ ವರ್ಷ ವಿಮೆ ಮಾಡಿಸುವ ರೈತರ ಸಂಖ್ಯೆ ಏರಿಕೆಯಾಗಿದೆ.

ಶಿವರಾಮ ಹೆಬ್ಬಾರ

ಕಾರ್ಮಿಕ ಸಚಿವ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ

-----------------

ಅಂಕಿ–ಅಂಶ

ತಾಲ್ಲೂಕು;ವಿಮೆ ಮೊತ್ತ (ರೂ.ಲಕ್ಷಗಳಲ್ಲಿ);ಕಟಾವಿನ ನಂತರದ ನಷ್ಟಕ್ಕೆ ದೊರೆತ ಪರಿಹಾರ

ಶಿರಸಿ;80.83; 13.94

ಸಿದ್ದಾಪುರ;13.73; 5.18

ಮುಂಡಗೋಡ;33.07; 133.36

ಯಲ್ಲಾಪುರ;24.24; 16.70

ಹಳಿಯಾಳ;136.98; 184.08

ಜೋಯಿಡಾ;330.62; 26.57

ಕಾರವಾರ;1.34; 6.47

ಅಂಕೋಲಾ;0; 0.33

ಕುಮಟಾ;3.95; 3.01

ಹೊನ್ನಾವರ;0; 0.06

ಭಟ್ಕಳ;3.44; 0.12

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT