ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದ, ನಾದ ಪ್ರಿಯ ಶಿವ: ರಾಘವೇಶ್ವರ ಸ್ವಾಮೀಜಿ

Last Updated 8 ಜೂನ್ 2019, 13:46 IST
ಅಕ್ಷರ ಗಾತ್ರ

ಗೋಕರ್ಣ:‘ಈ ಪುಣ್ಯ ಕ್ಷೇತ್ರದಲ್ಲಿ ಇಲ್ಲಿಯವರೆಗೆ ವೇದಗಳು ಮಾತ್ರ ಇದ್ದವು. ಆದರೆ, ಇವತ್ತಿನಿಂದ ವೇದದ ಸಂಗಡ ನಾದವೂ ಸೇರಿಕೊಂಡಿದೆ. ಶಿವ, ವೇದ– ನಾದ ಪ್ರಿಯ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿನುಡಿದರು.

ಇಲ್ಲಿನಮಹಾಬಲೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ‘ಶಿವಪದ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿವನ ಸನ್ನಿಧಿಯಲ್ಲಿ ಯಾರು ಬೇಕಾದರೂ ತಮ್ಮ ಕಲಾ ಸೇವೆಯನ್ನು ನೀಡಬಹುದು. ಶಿವಪದ ವೇದಿಕೆ ಎಲ್ಲರಿಗೂ ಮುಕ್ತ ಅವಕಾಶ ನೀಡಲಿದೆ ಎಂದರು.

ವೇದಿಕೆಯ ಮೇಲೆ ಪಂಡಿತ್ ವೆಂಕಟೇಶಕುಮಾರ್, ಶಿಥಿಕಂಠ ಹಿರೇ, ಶಂಭುಭಟ್ ಕಡತೋಕಾ, ಶೀಲಾ ಹೊಸ್ಮನೆ ಇದ್ದರು. ಮಹಾಬಲ ಉಪಾಧ್ಯ ಸಭಾಪೂಜೆ ನೆರವೇರಿಸಿದರು. ಜಿ.ಕೆ.ಹೆಗಡೆ ಪ್ರಸ್ತಾವಿಕವಾಗಿ ಮಾತನಾಡಿದರು. ಮಹೇಶ ಶೆಟ್ಟಿ ವಂದಿಸಿದರು.

ಪ್ರಾರಂಭದಲ್ಲಿ ನಟರಾಜ ಮೂರ್ತಿಯನ್ನು ಮೆರವಣಿಗೆಯಲ್ಲಿ ವೇದಿಕೆಗೆ ತರಲಾಯಿತು. ಸಭಾ ಕಾರ್ಯಕ್ರಮದ ನಂತರ ಪಂಡಿತ್ ವೆಂಕಟೇಶಕುಮಾರ್ಗಾಯನ ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT