ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹತೆ: ವಾಟ್ಸ್‌ಆ್ಯಪ್‌ನಲ್ಲಿ ಮತದಾರಿಗೆ ಮನವಿ ಮಾಡಿದ ಶಿವರಾಮ ಹೆಬ್ಬಾರ್

Last Updated 28 ಜುಲೈ 2019, 8:22 IST
ಅಕ್ಷರ ಗಾತ್ರ

ಶಿರಸಿ: ಸ್ಪೀಕರ್ ಅವರಿಂದ ಅನರ್ಹತೆ ಘೋಷಣೆಯಾಗುತ್ತಿದ್ದಂತೆ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಸಾಮಾಜಿಕ ಜಾಲತಾಣ ಹಾಗೂವಾಟ್ಸ್‌ಆ್ಯಪ್ ಮೂಲಕ ಮತದಾರಲ್ಲಿ ಮನವಿ ಮಾಡಿದ್ದಾರೆ.

'ನನ್ನ ಅಭಿಮಾನಿ ಕಾರ್ಯಕರ್ತ ಬಂಧುಗಳೇ, ಸುಪ್ರೀಂ ಕೋರ್ಟ್ ಆದೇಶವಿದ್ದಾಗಲೂ, ರಾಜೀನಾಮೆಯನ್ನು ಮೊದಲೇ ನೀಡಿದ್ದರೂ, ಕೆಲವರ ಒತ್ತಡದಿಂದ ಪಕ್ಷಪಾತಿಯಾಗಿ ತೆಗೆದುಕೊಂಡಸ್ಪೀಕರ್‌ರ ಅನರ್ಹತೆ ನಿರ್ಣಯ ಅತೀ ಶೀಘ್ರದಲ್ಲೇ ಸುಪ್ರೀಂ ಕೋರ್ಟ್ ಪರಿಶೀಲನೆಗೆ ಒಳಪಡಲಿದೆ ಹಾಗೂ ನ್ಯಾಯಕ್ಕೆ ಜಯವಾಗಲಿದೆ' ಎಂದಿದ್ದಾರೆ.

'ಯಾರೂ ದೃತಿಗೆಡಬೇಕಾಗಿಲ್ಲ, ನನ್ನ ಅಭಿಮಾನಿಗಳು ಹಾಗೂ ಮತದಾರರ ಮೇಲೆ ಸಂಪೂರ್ಣ ವಿಶ್ವಾಸವಿದೆ, ಮತ್ತೆ ಜನತಾ ನ್ಯಾಯಾಲಯದ ಮುಂದೆ ಹೋಗಲಿದ್ದೇನೆ.ನಿಮ್ಮೆಲ್ಲರಲ್ಲಿ ನನ್ನ ಈ ನಿರ್ದಾರಕ್ಕೆ ಕಾರಣಗಳನ್ನು ವಿಸ್ತಾರವಾಗಿ ತಿಳಿಸುತ್ತೇನೆ.
ಸ್ಪೀಕರ್ ನೀಡಿದ ನ್ಯಾಯಸಮ್ಮತವಲ್ಲದ ತೀರ್ಪಿಗೆ ಖಂಡಿತವಾಗಿಯೂ ಸುಪ್ರೀಂನಲ್ಲಿ ನ್ಯಾಯ ಸಿಗಲಿದೆ ಹಾಗೂ ನನ್ನ ನಿರ್ಧಾರಕ್ಕೆ ಯಲ್ಲಾಪುರ-ಮುಂಡಗೋಡ-ಬನವಾಸಿ ಕ್ಷೇತ್ರದ ಮತದಾರರು, ಅಭಿಮಾನಿ ‌ಕಾರ್ಯಕರ್ತರು ನನ್ನಪರವಾದ ತೀರ್ಪು ನೀಡಲಿದ್ದಾರೆ ಎಂಬ ಅಚಲ ವಿಶ್ವಾಸವಿದೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT