ಗುರುವಾರ , ಜುಲೈ 29, 2021
23 °C

ಕೋವಿಡ್‌ನಿಂದ ಆರು ಮಂದಿ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಕೋವಿಡ್ 19ನಿಂದ ಗುಣಮುಖರಾದ ಆರು ಮಂದಿಯನ್ನು ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್ ವಾರ್ಡ್‌ನಿಂದ ಶನಿವಾರ ಬಿಡುಗಡೆ ಮಾಡಲಾಯಿತು. ‌

ಸೋಂಕು ಮುಕ್ತರಾದವರಲ್ಲಿ ಹಳಿಯಾಳದ ಇಬ್ಬರು, ದಾಂಡೇಲಿಯ ಇಬ್ಬರು, ಕಾರವಾರ ಮತ್ತು ಕುಮಟಾದ ತಲಾ ಒಬ್ಬರು ಸೇರಿದ್ದಾರೆ. ದಾಂಡೇಲಿಯ 24 ಹಾಗೂ 34 ವರ್ಷದ ಇಬ್ಬರು ಯುವಕರು, ಕಾರವಾರದ 24 ವರ್ಷದ ಮಹಿಳೆ, ಹಳಿಯಾಳದ 14 ವರ್ಷದ ಬಾಲಕ ಹಾಗೂ 25 ವರ್ಷದ ಮಹಿಳೆ, ಕುಮಟಾದ 54 ವರ್ಷದ ವ್ಯಕ್ತಿ ಆಸ್ಪತ್ರೆಯಿಂದ ಬಿಡುಗಡೆಯಾದರು. 

ಈ ನಡುವೆ, ಜಿಲ್ಲೆಯಲ್ಲಿ ಮತ್ತೆ ನಾಲ್ವರಿಗೆ ಕೋವಿಡ್ 19 ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಕುಮಟಾಕ್ಕೆ ವಾಪಸಾಗಿರುವ 26 ವರ್ಷದ ಮಹಿಳೆ, ಮುಂಬೈನಿಂದ ಭಟ್ಕಳಕ್ಕೆ ಬಂದಿರುವ 24ರ ಯುವಕ, 45 ವರ್ಷದ ಪುರುಷ ಹಾಗೂ ದುಬೈನಿಂದ ಭಟ್ಕಳಕ್ಕೆ ವಾಪಸಾಗಿರುವ 36 ವರ್ಷದ ಮಹಿಳೆಗೆ ಸೋಂಕು ಖಚಿತವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 31ಕ್ಕೇರಿದೆ. 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು