ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂದಾ ಅರಸರ ಸಾಹಸ ಪಠ್ಯವಾಗಲಿ: ವೆಂಕಟೇಶ ನಾಯಕ

ಕಾರವಾರದ ನಂದವಾಳದಲ್ಲಿ ‘ವಿಜಯ ದಿವಸ’ ಆಚರಣೆ ಸಮಾರಂಭ
Last Updated 26 ಫೆಬ್ರುವರಿ 2020, 10:51 IST
ಅಕ್ಷರ ಗಾತ್ರ

ಕಾರವಾರ: ‘ದೇಶದಸ್ವಾತಂತ್ರ್ಯ ಹೋರಾಟದಲ್ಲಿ ಸಿಪಾಯಿದಂಗೆ ಹಾಗೂ ಕ್ವಿಟ್ ಇಂಡಿಯಾ ಚಳವಳಿ ಮಾತ್ರವಲ್ಲ, 1725ರ ಫೆ.26ರ ಕೂಡ ಮಹತ್ವದ್ದಾಗಿದೆ. ಇಲ್ಲಿಬ್ರಿಟಿಷರ ಧ್ವಜ ಇಳಿಸಿದ ಸೋಂದಾ ಅರಸ ಸದಾಶಿವ ನಾಯಕ ಅವರ ಹೋರಾಟ ಸದಾ ಸ್ಮರಣೀಯ’ ಎಂದುಶಾಸಕಿ ರೂಪಾಲಿ ನಾಯ್ಕ ಹೇಳಿದರು.

ತಾಲ್ಲೂಕಿನ ಕಡವಾಡ ಗ್ರಾಮದ ನಂದವಾಳದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ವಿಜಯ ದಿವಸ ಆಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಬಿ.ಜೆ.ಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ‘ನಿಜವಾದ ಸ್ವಾತಂತ್ರ್ಯ ಹೋರಾಟ ಆರಂಭವಾಗಿದ್ದು ಕಾರವಾರದ ಮಣ್ಣಿನಲ್ಲಿ ಎಂಬ ಹೆಮ್ಮೆ ನಮಗಿದೆ. ಸದಾಶಿವನಾಯಕನ ಜೀವನ ಚರಿತ್ರೆಯನ್ನು ಶಾಲಾಪಠ್ಯದಲ್ಲಿ ಸೇರಿಸುವ ಕೆಲಸ ಸರ್ಕಾರದಿಂದ ಆಗಬೇಕು’ ಎಂದು ಹೇಳಿದರು.

ಪಕ್ಷದ ಮುಖಂಡ ಅರುಣ ನಾಡಕರ್ಣಿ ಮಾತನಾಡಿ, ‘ನಂದವಾಳದಲ್ಲಿರುವುದುಸಾಮಾನ್ಯ ಧ್ವಜವಲ್ಲ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಸಿಕ್ಕಿದಸ್ಥಳ ಇದಾಗಿದೆ. ಇದಕ್ಕೊಂದು ಟ್ರಸ್ಟ್ನಿರ್ಮಿಸಬೇಕು. ಆಮೂಲಕ ಇಲ್ಲಿಯ ಐತಿಹಾಸಿಕ ಸ್ಥಳ ಹಾಗೂ ವೀರಯೋಧರ ಬಗ್ಗೆ ಜನರಿಗೆ ತಿಳಿಸುವ ಕಾರ್ಯವಾಗಬೇಕು. ತಾಲ್ಲೂಕಿನ ರೈಲುನಿಲ್ದಾಣಗಳಲ್ಲಿ ಫ್ಲೆಕ್ಸ್ ಹಾಕಿ ಪ್ರಯಾಣಿಕರಿಗೆ ಪರಿಚಯಿಸುವ ಕೆಲಸ ಶಾಸಕರಿಂದ ಆಗಬೇಕು’ಎಂದುಹೇಳಿದರು.

ಸಾಧಕರಿಗೆ ಸನ್ಮಾನ:ಕಾರ್ಯಕ್ರಮದಲ್ಲಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಧ್ವಜಾರೋಹಣ ನೆರವೇರಿಸಿದರು.

ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ರತ್ನಾಕರ ಕಾಂತ್ರೇಕರ್, ಪದ್ಮಶ್ರೀ ಪುರಸ್ಕೃತೆತುಳಸಿ ಗೌಡ,ಬಿಲ್ಲುಗಾರಿಕೆಸ್ಪರ್ಧೆಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಅಂಕೋಲಾದ ಅಮಿತ ಗೌಡ, ಹೊನ್ನಾವರದ ಕಮಲಾಕರ ಮೇಸ್ತಾ ಹಾಗೂ ಬಿ.ಜೆ.ಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಅವರನ್ನು ಸನ್ಮಾನಿಸಲಾಯಿತು.

ಯುವ ಮೊರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಜನ್ನು, ಪಕ್ಷದ ನಗರ ಘಟಕದ ಅಧ್ಯಕ್ಷ ನಾಗೇಶ ಕುರ್ಡೇಕರ್, ವಕ್ತಾರ ರಾಜೇಶ ನಾಯ್ಕ, ಸುಧೀರ ಸಾಳಸ್ಕರ್, ಮನೋಜ ಭಟ್ಟ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT