ಕಾರವಾರ: ತಾಲ್ಲೂಕಿನ ಎಲ್ಲ ಭಾಗಗಳಲ್ಲಿ ಭತ್ತದಕೊಳವೆ (ಸುರುಳಿ ಹುಳ) ಹುಳಬಾಧೆ ಕಾಣಿಸಿಕೊಂಡಿದೆ. ಸಸಿ ಮಡಿಗಳಿಂದ ಶುರುವಾಗಿ ನಾಟಿ ಮಾಡಿದ ಗದ್ದೆಗಳಲ್ಲಿ 45ರಿಂದ 50 ದಿನಗಳವರೆಗೆ (ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ) ಇವುಗಳ ಬಾಧೆ ಹೆಚ್ಚಾಗಿರುತ್ತದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಹುಳುಬಾಧೆ ಕಂಡು ಬಂದ ಹೊಲಗಳಲ್ಲಿ ರೈತರು, ಎರಡರಿಂದ ನಾಲ್ಕು ಸೆಂಟಿಮೀಟರ್‌ಗಳವರೆಗೆ ನೀರು ನಿಲ್ಲಿಸಬೇಕು. ಇಬ್ಬರು ಹಗ್ಗದ ಎರಡು ತುದಿಗಳನ್ನು ಹಿಡಿದು ಗದ್ದೆಯ ಒಂದು ಕಡೆಯಿಂದ ಮತ್ತೊಂದು ಕಡೆಗೆ ಗಿಡಗಳ ಮೇಲೆ ಬಡಿಯುತ್ತಾ ಸಾಗಬೇಕು.

ಹುಳಗಳು ನೀರಿರುವ ಜಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿಕಂಡು ಬರುತ್ತವೆ. ಆದ್ದರಿಂದ ಸ್ವಲ್ಪಕಾಲ ಗದ್ದೆಯಲ್ಲಿ ನೀರುನಿಲ್ಲದಂತೆ ನೋಡಿಕೊಳ್ಳುವುದು ಸೂಕ್ತ. ಅಂತೆಯೇ ಕ್ಲೋರೊಫೈರಿಫಾಸ್ ಎರಡು ಎಂ.ಎಲ್ ಅನ್ನು ಪ್ರತಿ ಲೀಟರ್ ನೀರಿಗೆ ಸೇರಿಸಬೇಕು. ಎಕರೆಗೆ 200 ಲೀಟರ್ ಸಿಂಪರಣಾ ದ್ರಾವಣ ತಯಾರಿಸಿ ಸಂಜೆ ನಾಲ್ಕರಿಂದ ಆರು ಗಂಟೆಯೊಳಗೆ ಗಿಡ ಹಾಗೂ ಬುಡ ತೋಯುವಂತೆ ಸಿಂಪಡಿಸಬೇಕು. ಕ್ಲೋರೊಫೈರಿಫಾಸ್ ರಾಸಾಯನಿಕವು ತಾಲ್ಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08382 200223ಗೆ ಸಂಪರ್ಕಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.