ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕೋಲಾ ಆಸ್ಪತ್ರೆಗೆ ಹೊಸ ಡಯಾಲಿಸಿಸ್ ಉಪಕರಣ: ಶಾಸಕಿ ರೂಪಾಲಿ

Last Updated 26 ಸೆಪ್ಟೆಂಬರ್ 2022, 15:38 IST
ಅಕ್ಷರ ಗಾತ್ರ

ಕಾರವಾರ: ‘ಅಂಕೋಲಾ ತಾಲ್ಲೂಕು ಆಸ್ಪತ್ರೆಗೆ 2– 3 ದಿನಗಳಲ್ಲಿ ಹೊಸ ಡಯಾಲಿಸಿಸ್ ಉಪಕರಣ ಪೂರೈಕೆಯಾಗಲಿದೆ. 15 ದಿನಗಳಲ್ಲಿ ಮತ್ತೆರಡು ಡಯಾಲಿಸಿಸ್ ಉಪಕರಣಗಳು ಸಿಗಲಿವೆ’ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.

‘ಕ್ಷೇತ್ರದ ಜನರ ಅನುಕೂಲಕ್ಕಾಗಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಖರೀದಿಸಲಾಗುತ್ತಿದೆ. ಅಂಕೋಲಾಕ್ಕೆ ಮೂರು ಹಾಗೂ ಕಾರವಾರಕ್ಕೆ ಒಂದು ಡಯಾಲಿಸಿಸ್ ಉಪಕರಣವನ್ನು ನೀಡಲಾಗುವುದು’ ಎಂದು ಹೇಳಿದ್ದಾರೆ.

‘ಅಂಕೋಲಾ ಆಸ್ಪತ್ರೆಯಲ್ಲಿದ್ದ ಎರಡು ಉಪಕರಣಗಳಲ್ಲಿ ಒಂದು ಕೆಟ್ಟುಹೋಗಿದೆ. ಹೊಸದನ್ನು ಸೆ.26ರಂದು ನೀಡುವುದಾಗಿ ಪೂರೈಕೆದಾರರು ತಿಳಿಸಿದ್ದರು. ಆದರೆ, ಉಪಕರಣ ಲಭ್ಯವಾಗದ ಕಾರಣ ಪೂರೈಕೆಯಲ್ಲಿ ಸ್ವಲ್ಪ ವಿಳಂಬವಾಗಿದೆ. ಇನ್ನೆರಡು ಮೂರು ದಿನಗಳಲ್ಲಿ ಹೊಸದನ್ನು ಅಂಕೋಲಾ ಆಸ್ಪತ್ರೆಗೆ ತಂದು ಅಳವಡಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.

‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 15 ದಿನಗಳಲ್ಲಿ ಮತ್ತೆ ಎರಡು ಹೊಸ ಉಪಕರಣಗಳು ಅಂಕೋಲಾ ಆಸ್ಪತ್ರೆಗೆ ಲಭಿಸಲಿವೆ. ಈ ಬಗ್ಗೆ ಪ್ರಕ್ರಿಯೆ ಆರಂಭವಾಗಿದೆ. ಈ ಯಂತ್ರ ಅಳವಡಿಕೆಗೆ ಅನುಕೂಲ ಕಲ್ಪಿಸುವ ಬಗ್ಗೆಯೂ ಮಾತುಕತೆ ನಡೆಸಲಾಗಿದೆ’ ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT