ಸಹಾಯವಾಣಿ ಸಂಖ್ಯೆ ಬಸ್‍ನಲ್ಲಿಲ್ಲ
ತಾಲ್ಲೂಕಿನಲ್ಲಿ 148 ಬಸ್ ಸಂಚರಿಸುತ್ತಿದ್ದು ಒಂದು ಬಸ್ಸಿನಲ್ಲಿ ಕೂಡಾ ಮಕ್ಕಳ ಸಹಾಯವಾಣಿ ಸಂಖ್ಯೆ ಇರದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ತಿಪ್ಪೆಸ್ವಾಮಿ ಅವರು ಆಯೋಗದಿಂದ ಈ ಕುರಿತ ಸ್ಟಿಕರ್ ನೀಡುವುದಾಗಿಯೂ ಎಲ್ಲ ಬಸ್‍ಗಳಲ್ಲಿ ಜನಸಾಮಾನ್ಯರಿಗೆ ಮಕ್ಕಳಿಗೆ ಕಾಣುವ ಜಾಗದಲ್ಲಿ ಮೂರು ದಿನಗಳೊಳಗೆ ಅಂಟಿಸುವಂತೆ ಎನ್.ಡಬ್ಲ್ಯು.ಕೆ.ಆರ್.ಟಿ.ಸಿ. ಅಧಿಕಾರಿಗೆ ಸೂಚಿಸಿದರು.