ಕಾರವಾರದ ಬೈತಕೋಲದಲ್ಲಿರುವ ಕರಾವಳಿ ಕಾವಲು ಪಡೆಯ ಇಳಿದಾಣದ ಶೆಡ್‍ನಲ್ಲಿ ಗಸ್ತು ಬೋಟ್‍ನ್ನು ನಿರ್ವಹಣಾ ಕಾರ್ಯದ ಸಲವಾಗಿ ಇರಿಸಲಾಗಿದೆ.
ಒಂದು ಗಸ್ತು ಬೋಟ್ ಸನ್ನದ್ಧ ಸ್ಥಿತಿಯಲ್ಲಿಯೇ ಇದೆ. ಇನ್ನೊಂದನ್ನು ನಿರ್ವಹಣೆ ಸಲುವಾಗಿ ದಡದಲ್ಲಿಟ್ಟಿದ್ದು ಎರಡು ವಾರದೊಳಗೆ ಸಮುದ್ರಕ್ಕೆ ಇಳಿಯಲಿದೆ. ಸಮುದ್ರ ಬಿರುಸುಗೊಂಡಿರುವ ಕಾರಣ ಕಾರ್ಯಾಚರಣೆಗೆ ಅನುಕೂಲವಾಗುತ್ತಿಲ್ಲ.