ಶಿರಸಿ: ಹಾನಗಲ್ ತಾಲ್ಲೂಕಿನ ಅಕ್ಕಿಆಲೂರಿನಿಂದ ಶಿರಸಿ ಮಾರ್ಗವಾಗಿ ಸೊರಬ, ಶಿವಮೊಗ್ಗ ಕಡೆಗೆ ಸಾಗಿಸಲು ಯತ್ನಿಸಿದ ಐವರನ್ನು ವಾಹನ ಸಮೇತ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ನರೇಬೈಲ ಕ್ರಾಸ್ ಬಳಿ ಪೊಲೀಸರು ವಾಹನ ತಡೆದು ತಪಾಸಣೆ ನಡೆಸಿದ್ದರು. ಈ ವೇಳೆ ಓಮ್ನಿ ವಾಹನದಲ್ಲಿ ಒಂದು ಕ್ವಿಂಟಲ್ 95 ಕೆಜಿ ದನದ ಮಾಂಸ ಮತ್ತು ಚರ್ಮವನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿತ್ತು.

ಆರೋಪಿಗಳಾದ ಅಕ್ಕಿಆಲೂರಿನ ಸಲೀಂಬಾಷಾ ಬಹದ್ದೂರ, ಜಾವೇದ ಬೇಪಾರಿ, ಖಾಜಾಮುದ್ದಿನ ಬೇಪಾರಿ, ಸಲೀಂ ಬೇಪಾರಿ ಹಾಗೂ ಶಿರಸಿಯ ಮುಸ್ಲಿಂಗಲ್ಲಿಯ ಖಲೀಲುಲ್ಲಾ ಶೇಖ ಇವರನ್ನು ಬಂಧಿಸಲಾಗಿದೆ.

ಬಂಧಿತರಿಂದ 44,500 ರೂಪಾಯಿ ಮೌಲ್ಯದ ದನದ ಮಾಂಸ ಮತ್ತು ಎರಡು ಲಕ್ಷ ರೂಪಾಯಿ ಮೌಲ್ಯದ ವಾಹನ ಜಪ್ತಿಮಾಡಲಾಗಿದೆ ಎಂದು ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.