ನಾಗರಪಂಚಮಿ ಶುಕ್ರವಾರ ಬಂದಿದ್ದರಿಂದ ಬೆಳಿಗ್ಗೆಯಿಂದಲೇ ಸಾಲಿನಲ್ಲಿ ನಿಂತು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಹಳ್ಳಿಯ ಜನರಲ್ಲದೇ ಬೇರೆ ಊರಿನ ಜನರೂ ನಾಗೇಶ್ವರ ದೇವಸ್ಥಾನದ ಆವರಣದಲ್ಲಿ ತಾವೇ ಪ್ರತಿಷ್ಠೆ ಮಾಡಿದ ನಾಗರ ಕಲ್ಲಿಗೆ ನೀರು, ಹಾಲು ಹಾಕಿ ಪೂಜೆ ಮಾಡಿದರು. ಮಳೆ ಬಿಡುವುದು ನೀಡಿದ್ದರಿಂದ ಸಂಭ್ರಮದಿಂದ ಆಚರಿಸಿದರು.