ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಕೋಲಾ: ₹15 ಲಕ್ಷ ಮೌಲ್ಯದ ಮಾದಕ ವಸ್ತು ನಾಶ

Published 9 ಫೆಬ್ರುವರಿ 2024, 14:19 IST
Last Updated 9 ಫೆಬ್ರುವರಿ 2024, 14:19 IST
ಅಕ್ಷರ ಗಾತ್ರ

ಅಂಕೋಲಾ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾಗಿದ್ದ ಸುಮಾರು ₹15 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ತಾಲ್ಲೂಕಿನ ಬೊಗ್ರಿಬೈಲಿನ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಶುಕ್ರವಾರ ನಾಶ ಪಡಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಉಪಸ್ಥಿತಿಯಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮಾದಕ ವಸ್ತುಗಳನ್ನು ಹಂತ ಹಂತವಾಗಿ ನಾಶಪಡಿಸಿದರು. ಘಟಕದಲ್ಲಿರುವ ವೈದ್ಯಕೀಯ ತ್ಯಾಜ್ಯ ವಿಲೇವಾರಿ ವಿಭಾಗದಲ್ಲಿರುವ ಉಪಕರಣದ ಸಹಾಯದಿಂದ ಸುಡಲಾಯಿತು.

‘ಜಿಲ್ಲೆಯಲ್ಲಿ 32 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ₹5.06 ಲಕ್ಷ ಮೌಲ್ಯದ 14.22 ಕೆ.ಜಿ ಗಾಂಜಾ, ಪ್ರಕರಣವೊಂದರಲ್ಲಿ ವಶಪಡಿಸಿಕೊಳ್ಳಲಾಗಿದ್ದ ₹10 ಲಕ್ಷ ಮೌಲ್ಯದ 1.5 ಕೆ.ಜಿ ಚರಸ್ ಮತ್ತು ಒಂದು ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾಗಿದ್ದ ₹10 ಸಾವಿರ ಮೌಲ್ಯದ 48 ಗ್ರಾಂ ಗಾಂಜಾ ಗಿಡ ಸೇರಿದಂತೆ ಒಟ್ಟು 34 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ₹15.16 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ನ್ಯಾಯಾಲಯದ ಅನುಮತಿ ಪಡೆದು ಪರಿಸರಕ್ಕೆ ಹಾನಿಯಾಗದಂತೆ ನಾಶಪಡಿಸಲಾಯಿತು’ ಎಂದು ಎನ್.ವಿಷ್ಣುವರ್ಧನ ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಜಗದೀಶ, ಕಾರವಾರ ಡಿಎಸ್‍ಪಿಗಳಾದ ವೆಲೆಂಟೈನ್ ಡಿಸೋಜಾ, ಮಹೇಶ, ಕೆ.ಎಲ್.ಗಣೇಶ, ಪಿಐಗಳಾದ ಶ್ರೀಕಾಂತ ತೋಟಗಿ, ಎನ್.ರಂಗನಾಥ, ನೇಹಾಲಕಾಂತ, ರಾಮಚಂದ್ರ ನಾಯಕ, ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT