ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಗ್ಗೂರು: ಚಿರತೆಗೆ ಆಕಳು ಬಲಿ

Published 16 ಜನವರಿ 2024, 15:35 IST
Last Updated 16 ಜನವರಿ 2024, 15:35 IST
ಅಕ್ಷರ ಗಾತ್ರ

ಹೊನ್ನಾವರ: ತಾಲ್ಲೂಕಿನ ದುಗ್ಗೂರಿನ ಪಾಚಿಗಿಡ್ಡನಮನೆಯ ಚಂದ್ರಶೇಖರ ಹೆಗಡೆ ಎಂಬವರಿಗೆ ಸೇರಿದ ತೋಟದಲ್ಲಿ ಸೋಮವಾರ ಬೀರು ಗೌಡ ಎಂಬವರಿಗೆ ಸೇರಿದ ಆಕಳೊಂದರ ಮೇಲೆ ದಾಳಿ ಮಾಡಿರುವ ಚಿರತೆ ಆಕಳನ್ನು ಕೊಂದು ದೇಹವನ್ನು ಅರ್ಧಬಂರ್ಧ ತಿಂದು ಹಾಕಿದೆ.

ದುಗ್ಗೂರಿನಲ್ಲಿ ಕಳೆದ 15 ದಿನಗಳ ಅವಧಿಯಲ್ಲಿ ಎರಡನೇ ಬಾರಿಗೆ ಚಿರತೆ ದಾಳಿ ಮಾಡಿರುವ ವರದಿಯಾಗಿದ್ದು ಘಟನೆ ಅಲ್ಲಿನ ಜನರ ನಿದ್ದೆಗೆಡಿಸಿದೆ.

ಎರಡು ವಾರಗಳ ಹಿಂದೆ ಇದೇ ಊರಿನಲ್ಲಿ ಕೊಟ್ಟಿಗೆಗೆ ನುಗ್ಗಿದ್ದ ಚಿರತೆ ಆಕಳ ಕರುವೊಂದನ್ನು ತಿಂದು ಹಾಕಿತ್ತು' ಎಂದು ಸ್ಥಳೀಯರು ತಿಳಿಸಿದ್ದಾರೆ.

ಉಪ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಹಾಗೂ ಗಾಡರ್್ ಮುರ್ತುಜಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಿರತೆ ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿ ಘಟನಾ ಸ್ಥಳದಲ್ಲಿ ಬೋನ್ ಅಳವಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT