‘ಎರಡು ವರ್ಷಕ್ಕೊಮ್ಮೆ ಸಮೀಕ್ಷೆ’
‘ಪ್ರತಿ ಎರಡು ವರ್ಷಕ್ಕೊಮ್ಮೆ ಜಿಲ್ಲಾವಾರಿ ಆರ್ಥಿಕ ಚಟುವಟಿಕೆಗಳ ಮಾಹಿತಿ ಆಧರಿಸಿ ತಾಲ್ಲೂಕುವಾರು ಸರಾಸರಿ ನಿರ್ಧರಿಸಲಾಗುತ್ತದೆ. ಉತ್ತರ ಕನ್ನಡದಲ್ಲಿನ ಆರ್ಥಿಕ ಚಟುವಟಿಕೆಗಳು ವಿಸ್ತರಣೆಯಾಗಿವೆ. ಅಲ್ಲಿನ ತಾಲ್ಲೂಕುವಾರು ತಲಾ ಆದಾಯದಲ್ಲೂ ವ್ಯತ್ಯಾಸಗಳಾಗಿರಬಹುದು. ಆದರೆ, ತಾಲ್ಲೂಕುವಾರು ವರದಿ ಇನ್ನಷ್ಟೆ ಸಿದ್ಧವಾಗಬೇಕಿದೆ’ ಎಂದು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜಂಟಿ ನಿರ್ದೇಶಕ ನರಸಿಂಹ ಫಣಿ ತಿಳಿಸಿದರು.