ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ: ಹನುಮಂತ ದೇವರ ಪಲ್ಲಕ್ಕಿ ಬೀಳ್ಕೊಡುಗೆ

Published 28 ಜೂನ್ 2023, 14:22 IST
Last Updated 28 ಜೂನ್ 2023, 14:22 IST
ಅಕ್ಷರ ಗಾತ್ರ

ಕುಮಟಾ: ತಾಲ್ಲೂಕಿನ ವಿವಿಧಡೆ ಸುಮಾರು ಒಂದೂವರೆ ತಿಂಗಳ ಕಾಲ ವಾಸ್ತವ್ಯ ಹೂಡಿದ್ದ  ಚಂದಾವರ ಹನುಮಂತ ದೇವರ ಬೀಳ್ಕೊಡುವ ಪಲ್ಲಕ್ಕಿ ಮೆರವಣಿಗೆಯಲ್ಲಿ ಬುಧವಾರ ಸಾವಿರಾರು ಭಕ್ತರು ಪಾಲ್ಗೊಂಡರು.

ಸುಮಾರು ಒಂದೂವರೆ ತಿಂಗಳ ಹಿಂದೆ ಹೊನ್ನಾವರದ ಕರ್ಕಿಯಿಂದ ಬಂದಿದ್ದ ಹನುಮಂತ ದೇವರ ಪಲ್ಲಕ್ಕಿ ಕುಮಟಾದ ಹೆಗಡೆ, ಮಾಸೂರಿನಲ್ಲಿ ವಾಸ್ತವ್ಯ ಹೂಡಿತ್ತು. ಅಲ್ಲಿಂದ ಪಟ್ಟಣದ ಶಾಂತಿಕಾ ಪರಮೇಶ್ವರಿ ದೇವಾಲಯಕ್ಕೆ ಆಗಮಿಸಿ ಸುಮಾರು ಹದಿನೈದು ದಿನ ವಾಸ್ತವ್ಯ ಹೂಡಿತ್ತು. ಬುಧವಾರ ಕುಮಟಾದಿಂದ ಚಂದಾವರದ ಮೂಲ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಪಲ್ಲಕಿ ತೆರಳುವಾಗ ಸಾವಿರಾರು ಭಕ್ತರು ಪಾಲ್ಗೊಂಡು ಬೀಳ್ಕೊಟ್ಟರು.

ಜನದಟ್ಟಣೆಯಿಂದ ಗುಡಿಗಾರಗಲ್ಲಿ ರಸ್ತೆ ಹಾಗೂ ಗಿಬ್ ವೃತ್ತದ ಬಳಿ ಹೆದ್ದಾರಿ ಸಂಚಾರಿ ಕೆಲ ಕಾಲ ಸ್ಥಗಿತಗೊಂಡಿತ್ತು.

ಹನುಮಂತ ದೇವರಿಗೆ ಭಕ್ತಾದಿಗಳು ವಿಶೇಷ ಪೂಜೆ, ಹರಕ್ಕೆ ಸಲ್ಲಿಸಿದ್ದರು. ಸ್ಥಳೀಯರು ದೇವರ ಮೂರ್ತಿಗೆ ಚಿನ್ನದ ಕಿರೀಟ ಕೊಡುಗೆಯಾಗಿ ನೀಡಿದ್ದಾರೆ ಎಂದು ಪಟ್ಟಣದ ಶಾಂತಿಕಾ ಮಿತ್ರ ಮಂಡಳಿಯ ಪ್ರಶಾಂತ ನಾಯ್ಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT