ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ಅತಿಕ್ರಮಣದಾರರ ಒಕ್ಕಲೆಬ್ಬಿಸಲಾಗದು: ರವೀಂದ್ರ

Last Updated 18 ಜನವರಿ 2023, 15:45 IST
ಅಕ್ಷರ ಗಾತ್ರ

ಶಿರಸಿ: ‘ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರಣ್ಯವಾಸಿಗಳ ಅರ್ಜಿ ಪರಿಶೀಲನಾ ಪ್ರಕ್ರಿಯೆ ಪೂರ್ಣವಾಗುವವರೆಗೆ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಲಾಗದು ಎಂಬ ಸರ್ಕಾರದ ಆದೇಶಕ್ಕೆ ಬದ್ಧರಾಗಿದ್ದೇವೆ ಎಂದು ಅರಣ್ಯ ಇಲಾಖೆ ಲಿಖಿತ ಉತ್ತರ ನೀಡಿದೆ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ತಿಳಿಸಿದ್ದಾರೆ.

‘ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರದಲ್ಲಿ ಕಾಲುವೆ ತೆಗೆಯುವ ಕೆಲಸ ಕಾನೂನು ಬಾಹಿರ ಎಂದು ಪ್ರತಿಪಾದಿಸಿ, ಜಿಪಿಎಸ್ ಮಾನದಂಡದ ಅಡಿಯಲ್ಲಿ ಕಾಲುವೆ ತೆಗೆದು ಒಕ್ಕಲೆಬ್ಬಿಸುವ ಕಾರ್ಯದ ಮೌಲ್ಯತೆಯ ಕುರಿತು ಕಾನೂನಾತ್ಮಕ ಉತ್ತರವನ್ನ ಬಯಸಿ ಬರೆದ ಪತ್ರಕ್ಕೆ ಶಿರಸಿ ಮತ್ತು ಯಲ್ಲಾಪುರ ಡಿ.ಸಿ.ಎಫ್. ಮೇಲಿನಂತೆ ಉತ್ತರಿಸಿದ್ದಾರೆ’ ಎಂದು ಹೇಳಿದರು.

‘ಅತಿಕ್ರಮಣದಾರರು ಹಿಂದಿನಿಂದಲೂ ವಾಸಿಸುತ್ತಿರುವ ಜಮೀನಿನಿಂದ ಒಕ್ಕಲೆಬ್ಬಿಸಬಾರದು ಹಾಗೂ ಅರಣ್ಯ ಒತ್ತುವರಿ ಮತ್ತು ಅರಣ್ಯವಾಸಿಯ ಪಟ್ಟಾ ಜಮೀನು ಸೇರಿ 3 ಎಕರೆಕ್ಕಿಂತ ಕಡಿಮೆ ಇರುವ ಅರಣ್ಯ ಒತ್ತುವರಿದಾರರನ್ನು ಒಕ್ಕಲೆಬ್ಬಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ’ ಎಂದು ಬುಧವಾರ ಅರಣ್ಯ ಇಲಾಖೆ ವೇದಿಕೆಗೆ ಉತ್ತರಿಸಿದ ಪತ್ರ ಬಿಡುಗಡೆಗೊಳಿಸಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT