ಗೋಕರ್ಣ: ಕೊರೊನಾ ವೈರಸ್ ವ್ಯಾಪಿಸಿರುವ ಈ ಹಂತದಲ್ಲಿ ತಮ್ಮ ದೇಶಗಳಿಗೆ ಹೋಗಲು ಸಾಧ್ಯವಾಗದ ವಿದೇಶಿ ಪ್ರವಾಸಿಗರಿಗೆ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಪೊಲೀಸರು ಸಹಾಯ ಹಸ್ತ ಚಾಚಿದ್ದಾರೆ. ಅವರವರ ರಾಯಭಾರ ಕಚೇರಿಗಳನ್ನು ಸಂಪರ್ಕಿಸಿ ವಾಪಸ್ ಹೋಗಲು ವಿಮಾನದ ವ್ಯವಸ್ಥೆ ಕಲ್ಪಿಸಿದ್ದಾರೆ.

ಈಗಾಗಲೇ ಫ್ರಾನ್ಸ್, ಜರ್ಮನಿ, ರಷ್ಯಾ, ಬೆಲ್ಜಿಯಂ, ಇಸ್ರೇಲ್, ಸ್ಪೇನ್, ಸ್ವೀಡನ್, ಡೆನ್ಮಾರ್ಕ್, ನೆದರ್‌ಲ್ಯಾಂಡ್ ಸೇರಿದಂತೆ ಒಟ್ಟು12 ದೇಶದ 91 ಪ್ರವಾಸಿಗರುಗೋಕರ್ಣದಿಂದನಿರ್ಗಮಿಸಿದ್ದಾರೆ.

ರಾಯಭಾರ ಕಚೇರಿಗಳಿಂದ ಒಪ್ಪಿಗೆ ಸಿಕ್ಕಿದ ಬಳಿಕ ಪ್ರವಾಸಿಗರುಹೋಗುವ ವಾಹನ, ಚಾಲಕನಮಾಹಿತಿಗಳನ್ನುಗೋವಾ ಗಡಿಯಲ್ಲಿದ್ದವರಿಗೆ ತಿಳಿಸಲಾಗಿತ್ತು. ಗೋವಾ ವಿಮಾನನಿಲ್ದಾಣಕ್ಕೆ ಹೋಗಲು ಯಾವುದೇ ತೊಂದರೆಆಗದಂತೆ ನೋಡಿಕೊಳ್ಳಲಾಗಿತ್ತು. ಗೋಕರ್ಣ ಪೊಲೀಸರ ಈ ಶ್ರಮಕ್ಕೆ ವಿದೇಶಗರೂ ಅಭಿನಂದಿಸಿದ್ದಾರೆ.

‘ಗೋವಾದಿಂದ ಬೆಲ್ಜಿಯಂಗೆ ವಿಮಾನ ಹೋಗಲು ಕೆಲವೇ ಗಂಟೆಗಳಿರುವಾಗ ಬೇಕಾದ ವ್ಯವಸ್ಥೆಯನ್ನೆಲ್ಲ ಮಾಡಿದ್ದಾರೆ. ನಮಗೆ ಯಾವುದೇ ತೊಂದರೆಆಗದಂತೆ ಸುರಕ್ಷಿತವಾಗಿ ನಮ್ಮ ದೇಶ ತಲುಪಲು ಸಹಕರಿಸಿದ್ದಾರೆ’ ಎಂದುಪಿ.ಎಸ್.ಐ ನವೀನ ನಾಯ್ಕ ಮತ್ತು ಸಿಬ್ಬಂದಿ ಶಿವಾನಂದ ಗೌಡ ಅವರಿಗೆ ಇವಾ ರೋಲಂಡ್ ಎಂಬ ಮಹಿಳೆ ಅಭಿನಂದಿಸಿಸಂದೇಶಕಳುಹಿಸಿದ್ದಾಳೆ.

ರಷ್ಯಾದವಿಮಾನ ರದ್ದು:ಗೋವಾದಿಂದ ಗುರುವಾರ ರಾತ್ರಿ ರಷ್ಯಾಕ್ಕೆ ಹೊರಡಬೇಕಾಗಿದ್ದ ವಿಮಾನದ ಸಂಚಾರ ದಿಢೀರ್ರದ್ದಾಗಿದೆ. ಗೋಕರ್ಣದಿಂದ ಒಟ್ಟು100 ಮಂದಿ ರಷ್ಯನ್ನರು ಅದರಲ್ಲಿ ತಮ್ಮ ದೇಶಕ್ಕೆ ಹೋಗುವವರಿದ್ದರು. ಆದರೆ, ಆ ದೇಶದಲ್ಲೂ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿದ್ದು,ಯಾರನ್ನೂ ಒಳಗೆ ಸೇರಿಸಿಕೊಳ್ಳುತ್ತಿಲ್ಲ. ಹಾಗಾಗಿ ರಷ್ಯಾಕ್ಕೆ ಕಳುಹಿಸುವುದನ್ನು ಸ್ವಲ್ಪ ಮಂದೂಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಒಟ್ಟು180 ಮಂದಿ ರಷ್ಯನ್ನರುಇಲ್ಲಿ ತಂಗಿದ್ದಾರೆ.ಅವರ ಸಮಗ್ರ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಈ ಪೈಕಿ 100ರಷ್ಟುಮಂದಿಮಾತ್ರಸ್ವದೇಶಕ್ಕೆ ಮರಳಲು ಒಪ್ಪಿದ್ದಾರೆ. ಉಳಿದವರು ಸದ್ಯ ರಷ್ಯಾ ಅನುಸರಿಸುತ್ತಿರುವ ಕಟ್ಟುನಿಟ್ಟಿನ ನಿರ್ಬಂಧಕ್ಕೆ ಹೆದರಿ ಇಲ್ಲಿಯೇ ಕೆಲವು ದಿನ ಉಳಿದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

‘ಗೋವಾದಿಂದ ಹೊರಡಬೇಕಿದ್ದ ವಿಮಾನ ಸಂಚಾರಮುಂದೂಡಲು ಕೊರೊನಾವೈರಸ್‌ನ ಭಯ ಕಾರಣ ಎನ್ನಲಾಗುತ್ತಿದೆ. ಕೆಲವು ದಿನಗಳ ಹಿಂದೆ ಬೇರೆ ದೇಶದಿಂದ ರಷ್ಯಾಕ್ಕೆ ವಿಶೇಷ ವಿಮಾನದಲ್ಲಿ ಬಂದ ಒಬ್ಬರಲ್ಲಿ ಕೋವಿಡ್ 19 ದೃಢಪಟ್ಟಿತ್ತು. ಹಾಗಾಗಿ ನಾವು ಸಂಚರಿಸಬೇಕಿದ್ದವಿಮಾನವನ್ನು ರದ್ದು ಮಾಡಿರಬಹುದು’ ಎಂದು ಇಲ್ಲಿರುವ ರಷ್ಯಾದಪ್ರಜೆಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

‘ವ್ಯವಸ್ಥೆ ಕಲ್ಪಿಸಲಾಗುವುದು’:‘ಗೋಕರ್ಣದಲ್ಲಿ ಇನ್ನೂ 350 ವಿದೇಶಿ ಪ್ರವಾಸಿಗರಿದ್ದಾರೆ. ಅವರಲ್ಲಿ ಕೆಲವರುವಾಪಸ್ಹೋಗಲು ಪ್ರಯತ್ನಿಸುತ್ತಿದ್ದಾರೆ. ಅಂಥವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಉಳಿದವರ ಮೇಲೂ ಗಮನವಿದ್ದು, ಕೆಲವರಿಗೆ ಉಳಿಯಲು, ಊಟದ, ಹಣಕಾಸಿನ ವ್ಯವಸ್ಥೆ ಮಾಡಲಾಗಿದೆ. ಅವರ ಆರೋಗ್ಯದ ಬಗ್ಗೆಯೂನಿಗಾ ಇಡಲಾಗಿದೆ’ ಎಂದು ಪಿ.ಎಸ್.ಐ ನವೀನ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.