ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಸೇನಬಿಗೆ ಒಲಿದ ಜನಪದಶ್ರೀ ಪ್ರಶಸ್ತಿ

Last Updated 25 ಮಾರ್ಚ್ 2023, 16:25 IST
ಅಕ್ಷರ ಗಾತ್ರ

ಹಳಿಯಾಳ: ಸಿದ್ದಿ ಸಮುದಾಯದ ಸಾಂಪ್ರದಾಯಿ ಡಮಾಮಿ ನೃತ್ಯ ಮತ್ತು ಹಾಡು ಕಲಿಸುವ ಮೂಲಕ ಹೆಸರು ಮಾಡಿರುವ ತಾಲ್ಲೂಕಿನ ಸಾಂಬ್ರಾಣಿ ಗ್ರಾಮದ ಹುಸೇನಬಿ ಬುಡನ್ ಸಾಬ್ ಮುಜಾವರ್ ಅವರಿಗೆ ರಾಜ್ಯ ಸರ್ಕಾರ ನೀಡುವ ಜನಪದಶ್ರೀ ಪ್ರಶಸ್ತಿ ಲಭಿಸಿದೆ.

ಡಮಾಮಿ ನೃತ್ಯದ ಮೂಲಕ ಬುಡಕಟ್ಟು ಸಿದ್ಧಿ ಸಮುದಾಯದ ಪ್ರತಿಭೆಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಲು ಹುಸೇನಬಿ ಕಾರಣರಾಗಿದ್ದಾರೆ. ಶತಾಯುಷಿಯಾಗಿರುವ ಅವರು ಸದ್ಯ ಸ್ವಗ್ರಾಮದಲ್ಲೇ ವಾಸವಿದ್ದಾರೆ. ಅವರಿಗೆ ಈ ಹಿಂದೆ ರಾಜ್ಯ ಜನಪದ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು.

‘ತಮ್ಮದೇ ಶೈಲಿಯಲ್ಲಿ ಡಮಾಮಿ ಸಾಂಪ್ರದಾಯಿ ಹಾಡುಗಳನ್ನು ರಚಿಸುವ ಜತೆಗೆ ಅವುಗಳನ್ನು ಕಲಿಸುವ ಮತ್ತು ನೃತ್ಯ ಹೇಳಿಕೊಡುವದರಲ್ಲಿ ಹುಸೇನಬಿ ನಿಷ್ಣಾತರಾಗಿದ್ದಾರೆ. ಹಲವು ಪ್ರತಿಭಾವಂತರನ್ನು ಬೆಳೆಸಿದ್ದು ಅವರು ಅಷ್ಟಾಗಿ ಮುನ್ನೆಲೆಗ ಬಂದಿರಲಿಲ್ಲ. ಸರ್ಕಾರಕ್ಕೆ ಎರಡು ವರ್ಷದ ಹಿಂದೆಯೇ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿತ್ತು. ಈಗ ಬಂದಿರುವುದು ಸಂತಸ ತಂದಿದೆ’ ಎಂದು ಕಲಾವಿದೆ ಜೂಲಿಯಾನಾ ಸಿದ್ಧಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT