ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಮಣ್ಣಿನಡಿ ಸಿಲುಕಿದ್ದ ಕಾರ್ಮಿಕರ ರಕ್ಷಣೆ

Published 4 ಮೇ 2023, 16:30 IST
Last Updated 4 ಮೇ 2023, 16:30 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಇಸಳೂರುಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಪ್ಪನಳ್ಳಿಯಲ್ಲಿ ಜೆಸಿಬಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಧರೆ ಕುಸಿದು ಮಣ್ಣಿನಡಿ ಸಿಲುಕಿದ್ದ ಮೂವರು ಕಾರ್ಮಿಕರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.

ಗುರುವಾರ ಇಲ್ಲಿನ ರಾಘವೇಂದ್ರ ಗೋಪಾಲ ನಾಯ್ಕ, ಹನುಮಂತ ರಾಜಪ್ಪ ಹರಿಜನ, ಇಮ್ರಾನ್ ಖಾನ್ ಜೆಸಿಬಿ ಮೂಲಕ ಮಣ್ಣು ತೆಗೆಯುವ ಕಾರ್ಯ ಮಾಡುತ್ತಿದ್ದಾಗ ಏಕಾಏಕಿ ಧರೆ ಕುಸಿದು ಮೂವರು ಮಣ್ಣಿನಡಿ ಸಿಲುಕಿದ್ದರು. ಸ್ಥಳೀಯ ರಮೇಶ ನಾಯ್ಕ ಎಂಬುವವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದರು.

ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದ ವಿನಾಯಕ ಗೌಡ ನೇತೃತ್ವದಲ್ಲಿ ಚಾಲಕರಾದ ರಮೇಶ ಜಂಬಗಿ, ಸಾತೀತಪ್ಪ, ಸಿಬ್ಬಂದಿ ದುಂಡಪ್ಪ, ಈರಣ್ಣ ಜುಬೇರ್ ಮುಲ್ಲಾ, ಕೃಷ್ಣ ನಾಯಕ, ತಂತ್ರಜ್ಞ ಪ್ರವೀಣ ಅವರು ಮೂವರನ್ನು ಮಣ್ಣಿನಡಿಯಿಂದ ಹೊರ ತೆಗೆದು ಅಂಬುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ಸಾಗಿಸಿದರು. ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT