ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಕೀಲರ ಸಂಘದ ಅಧ್ಯಕ್ಷರಾಗಿ ಮಾಸ್ತಿ ನಾಯ್ಕ ಆಯ್ಕೆ

Published 1 ಸೆಪ್ಟೆಂಬರ್ 2024, 13:31 IST
Last Updated 1 ಸೆಪ್ಟೆಂಬರ್ 2024, 13:31 IST
ಅಕ್ಷರ ಗಾತ್ರ

ಭಟ್ಕಳ: ವಕೀಲರ ಸಂಘದ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಎಂ.ಜೆ.ನಾಯ್ಕ, ಕಾರ್ಯದರ್ಶಿಯಾಗಿ ಆರ್.ಜಿ. ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಕೀಲರ ಸಂಘದ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.

ಸಂಘದ ಉಪಾಧ್ಯಕ್ಷರಾಗಿ ನಾಗರಾಜ ಎಸ್.ನಾಯ್ಕ, ಸಹಕಾರ್ಯದರ್ಶಿಯಾಗಿ ನಾಗರತ್ನಾ ನಾಯ್ಕ ಕೂಡಾ ಅವಿರೋಧವಾಗಿ ಆಯ್ಕೆಯಾದರು.

ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಗಣೇಶ ಎಂ.ದೇವಾಡಿಗ, ಹಿರಿಯ ವಕೀಲರಾದ ಆರ್.ಆರ್. ಶ್ರೇಷ್ಟಿ, ಎಂ.ಎಲ್.ನಾಯ್ಕ, ವಿ.ಎಫ್.ಗೋಮ್ಸ್, ಎಸ್.ಕೆ.ನಾಯ್ಕ, ಸಿ.ಎಂ.ಭಟ್ಟ, ನಾಗರಾಜ ಈ.ಎಚ್., ಜೆ.ಡಿ.ಭಟ್ಟ, ಎಸ್.ಜೆ.ನಾಯ್ಕ, ಎಂ.ಜಿ. ಗೊಂಡ, ಎನ್. ಎಂ.ಹೆಗಡೆ, ರಾಜೇಶ ನಾಯ್ಕ, ಪಾಂಡು ನಾಯ್ಕ, ಎಂ.ಟಿ.ನಾಯ್ಕ, ವಸೀಮ್ ಅಕ್ಕಿವಳ್ಳಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT