ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಾಕೃತಿಕ ವಿಕೋಪದಿಂದ ಪಾಠ ಕಲಿಯಲಿ: ಕೆ.ಪಿ.ನಾಯ್ಕ

Published 4 ಆಗಸ್ಟ್ 2024, 13:46 IST
Last Updated 4 ಆಗಸ್ಟ್ 2024, 13:46 IST
ಅಕ್ಷರ ಗಾತ್ರ

ಕಾರವಾರ: ‘ಪರಿಸರ ನಾಶದಿಂದ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪಗಳಿಂದ ಮನುಷ್ಯ ಪಾಠ ಕಲಿಯಬೇಕಿದೆ. ಪರಿಸರ ಉಳಿದರೆ ಮಾತ್ರ ಮನುಕುಲ ಉಳಿಯಬಹುದಾಗಿದೆ’ ಎಂದು ಶಿವಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಪಿ. ನಾಯ್ಕ ಹೇಳಿದರು.

ಇಲ್ಲಿಯ ಬಾಡದ ಶಿವಾಜಿ ಶಿಕ್ಷಣ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಕಾರವಾರ ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ವನ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಅನಾಹುತಗಳ ಸುದ್ದಿ ರಾರಾಜಿಸುತ್ತಿರುವ ಇಂದಿನ ದಿನಗಳಲ್ಲಿ ಗಿಡ, ಮರ, ವನಗಳ ಮಹತ್ವವನ್ನು ಯುವ ಪೀಳಿಗೆಗೆ ಮನದಟ್ಟು ಮಾಡಿಕೊಡುವುದು ಅಗತ್ಯ’ ಎಂದರು.

ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮನೆಯಂಗಳದಲ್ಲಿ ಔಷಧೀಯ ಸಸ್ಯಗಳನ್ನು, ಉಪಯುಕ್ತ ಔಷಧ ಮರಗಳ ಅರಣ್ಯಗಳನ್ನು ಬೆಳೆಸುವ ಕುರಿತು ಮಾಹಿತಿ ನೀಡಲಾಯಿತು. ವನೌಷಧಿಯ ಸಸಿಗಳ ಹಂಚಿಕೆ ಮಾಡಲಾಯಿತು.

ಬರ್ಗಲ್‍ನ ಅಮೃತಾ ಸಸ್ಯಮೂಲ ದ್ರವ್ಯ ಸಂಗ್ರಹಣೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಗಣೇಶ ನೆವರೇಕರ 200 ರಷ್ಟು ಸಸ್ಯಗಳನ್ನು ದಾನವಾಗಿ ನೀಡಿದ್ದಲ್ಲದೇ ಅವುಗಳ ಉಪಯುಕ್ತತೆ ಕುರಿತು ವಿವರಿಸಿದರು.‌

ಲಯನ್ಸ್ ಕ್ಲಬ್ ಕಾರವಾರ ಘಟಕದ ಅಧ್ಯಕ್ಷ ದೇವಾನಂದ ಮಂತ್ರಿ ಅಧ್ಯಕ್ಷತೆ ವಹಿಸಿದ್ದರು. ಎಸ್.ವಿ. ನಾಯಕ, ಅನಿರುದ್ಧ ಹಳದೀಪುರಕರ, ವಿನಯಾ ನಾಯ್ಕ, ವಿನೋದ ನಾಯ್ಕ, ಪ್ರಕಾಶ ರಾಣೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT