ಗೋವಾ, ಮಹಾರಾಷ್ಟ್ರ ಭಾಗದಲ್ಲಿನ ವಿಶಿಷ್ಟ ಸಂಪ್ರದಾಯ | ವಿಶೇಷ ಹರಕೆ ಹೊತ್ತವರಿಂದ ಹಬ್ಬದಾಚರಣೆ | 2 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ

ಕಾರವಾರ: ಮಾಘ ಚತುರ್ಥಿಗೆ ತಾಲ್ಲೂಕಿನಲ್ಲಿ ಸಿದ್ಧತೆಗಳು ಜೋರಾಗಿದ್ದು ಗುರುವಾರ ವಿಘ್ನನಿವಾರಕನ ಪೂಜೆ ನಡೆಯಲಿದೆ. ಭಾದ್ರಪದ ಮಾಸದ ಚತುರ್ಥಿ ವೇಳೆ ನಡೆಯುವ ಆಚರಣೆಯಂತೆ ಈಗಲೂ ಚತುರ್ಥಿ ಸಂಭ್ರಮ ಕಳೆಗಟ್ಟಲಿದೆ.

ಜಿಲ್ಲೆಯಲ್ಲಿ ಕಾರವಾರ ಭಾಗದಲ್ಲಿ ಮಾತ್ರ ಮಾಘ ಚತುರ್ಥಿ ಆಚರಿಸುವ ಪದ್ಧತಿ ಹಲವು ಕಾಲದಿಂದ ನಡೆದುಕೊಂಡು ಬಂದಿದೆ. ನೆರೆಯ ಗೋವಾ, ಮಹಾರಾಷ್ಟ್ರ ಭಾಗದಲ್ಲಿನ ಸಂಪ್ರದಾಯದಂತೆ ಇಲ್ಲಿಯೂ ಮಾಘ ಮಾಸದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ, ಪೂಜಿಸುವ ಪರಂಪರೆ ಆಚರಿಸಲಾಗುತ್ತಿದೆ.

ಮಾಘ ಚತುರ್ಥಿಗೆ ಮನೆಯಲ್ಲಿ ಮೂರ್ತಿ ಪ್ರತಿಷ್ಠಾಪಿಸಲು ಭಕ್ತರು ಸಜ್ಜುಗೊಂಡಿದ್ದು, ಬಗೆ ಬಗೆಯ ಮಂಟಪಗಳನ್ನು ನಿರ್ಮಿಸಲಾಗುತ್ತಿದೆ. ಕಲಾವಿದರು ಮೂರ್ತಿಗಳನ್ನು ಸಿದ್ಧಪಡಿಸಿಟ್ಟಿದ್ದಾರೆ. ಭಾದ್ರಪದ ಮಾಸದಂತೆ ನಾಲ್ಕೈದು ದಿನ ಹಬ್ಬದ ಸಂಭ್ರಮ ಇರದು. ಒಂದೇ ದಿನ ಮೂರ್ತಿ ಪೂಜೆ ನಡೆಸಿ, ಅದೇ ದಿನ ಸಾಯಂಕಾಲ ಮೂರ್ತಿ ವಿಸರ್ಜನೆ ಮಾಡುವುದು ವಾಡಿಕೆಯಾಗಿದೆ.

ತಾಲ್ಲೂಕಿನ ಮಾಜಾಳಿಯ ಗಾಂವಗೇರಿ ಕ್ರಾಸ್ ಸಮೀಪ ಸ್ಥಳೀಯ ಗಣೇಶೋತ್ಸವ ಸಮಿತಿಯವರು ಹಲವು ವರ್ಷದಿಂದ ಸಾಮೂಹಿಕ ಮಾಘ ಚತುರ್ಥಿ ಆಚರಿಸುತ್ತಿದ್ದಾರೆ. ದೊಡ್ಡ ಗಾತ್ರದ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಈ ಬಾರಿ ಅಲ್ಲಿಯೇ ಸಮೀಪದ ಘೋಟ್ನೆಬಾಗದಲ್ಲಿಯೂ ಸ್ಥಳೀಯರು ಸಾರ್ವಜನಿಕವಾಗಿ ಮಾಘ ಚತುರ್ಥಿ ಆಚರಿಸುತ್ತಿದ್ದಾರೆ.

‘ಭಾದ್ರಪದ ಮಾಸದ ಚತುರ್ಥಿ ವೇಳೆ ಗಣೇಶನ ಮೂರ್ತಿ ಪೂಜೆ ನೆರವೇರಿಸಲಾಗದವರು ಅಥವಾ ವಿಶೇಷ ಹರಕೆ ಹೊತ್ತವರು ಗಣೇಶ ಹುಟ್ಟಿದ ದಿನವಾದ ಮಾಘ ಚತುರ್ಥಿ ದಿನ ಪೂಜೆ ಸಲ್ಲಿಸುವ ವಾಡಿಕೆ ಇದೆ. ಮಾಘ ಚತುರ್ಥಿ ಆಚರಿಸಿದರೆ ಪ್ರಾರ್ಥನೆ ಫಲಿಸುತ್ತದೆ ಎಂಬ ದೃಢ ನಂಬಿಕೆ ಭಕ್ತರಲ್ಲಿದೆ. ಕೆಲವು ಕುಟುಂಬಗಳು ಪೂರ್ವಜರಿಂದ ಬಳುವಳಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ’ ಎನ್ನುತ್ತಾರೆ ಮಾಜಾಳಿಯ ಕಿಶನ್ ಕಾಂಬ್ಳೆ.

ಮಾಘ ಚತುರ್ಥಿ ಅಂಗವಾಗಿ ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಬಾಲೆ ಎಲೆ ಸೇರಿದಂತೆ ಅಗತ್ಯವಿರುವ ಸಾಮಗ್ರಿಗಳ ಮಾರಾಟ ಭರಾಟೆಯೂ ಹೆಚ್ಚಿದ್ದವು.

ಹೆಚ್ಚುತ್ತಿರುವ ಬೇಡಿಕೆ

‘ಮಾಘ ಚತುರ್ಥಿ ಆಚರಣೆ ಈ ಮೊದಲು ಕೆಲವೇ ಮನೆಗಳಲ್ಲಿ ನಡೆಯುತ್ತಿತ್ತು. ಪೂರ್ವಜರಿಂದ ಬಳುವಳಿಯಾಗಿ ಬಂದ ಆಚರಣೆಯನ್ನು ಮುನ್ನಡೆಸಿಕೊಂಡು ಬಂದಿದ್ದ ಕುಟುಂಬಗಳು ಬಳಿಕ ಪಾಳಿ ಆಧಾರದಲ್ಲಿ ಆಚರಿಸಿಕೊಂಡು ಬಂದಿದ್ದರು. ಈಚಿನ ವರ್ಷದಲ್ಲಿ ಮಾಘ ಚತುರ್ಥಿ ಆಚರಿಸುವ ಮನೆಗಳ ಸಂಖ್ಯೆ ಹೆಚ್ಚಿದೆ. ಇದರಿಂದ ಮೂರ್ತಿಗಳಿಗೆ ಬೇಡಿಕೆಯೂ ವೃದ್ಧಿಸಿದೆ. ಭಾದ್ರಪದ ಮಾಸದ ಚತುರ್ಥಿ ವೇಳೆ 350–400 ಮೂರ್ತಿ ತಯಾರಿಸಿದರೆ ಈಗ 30ರಿಂದ 40 ಮೂರ್ತಿಗಳನ್ನು ಸಿದ್ಧಪಡಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಸಂಖ್ಯೆ ಏರಿಕೆಯಾಗುತ್ತಿದೆ’ ಎನ್ನುತ್ತಾರೆ ಮೂರ್ತಿ ತಯಾರಕ ವಿಕಾಸ ಬಾಂದೇಕರ.