ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿ ಮೇಲ್ದರ್ಜೆಗೇರಿಸುವ ಕಾಮಗಾರಿ: ಹಲವು ರೈಲುಗಳ ಸಂಚಾರ ರದ್ದು

Last Updated 18 ಫೆಬ್ರುವರಿ 2022, 13:04 IST
ಅಕ್ಷರ ಗಾತ್ರ

ಕಾರವಾರ: ಪಡೀಲ್– ಕುಲಶೇಖರ ವಲಯದಲ್ಲಿ ದ್ವಿಪಥ ಮಾರ್ಗ ನಿರ್ಮಾಣಕ್ಕಾಗಿ ಹಳಿಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಯು ಮಾರ್ಚ್ 7ರ ತನಕ ನಡೆಯಲಿದೆ. ಹಾಗಾಗಿ, ಮಾರ್ಚ್ 4ರಂದು ಯಶವಂತಪುರ– ಕಾರವಾರ (16515) ಮತ್ತು ಮಾರ್ಚ್ 5ರಂದು ಕಾರವಾರ– ಯಶವಂತಪುರ ‌(16516) ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ.

ಇದೇರೀತಿ, ಮಾರ್ಚ್ 6ರಂದು ಮಂಗಳೂರು ಸೆಂಟ್ರಲ್– ಮಡಗಾಂವ್ ಜಂಕ್ಷನ್ (56640) ಹಾಗೂ ಮಡಗಾಂವ್ ಜಂಕ್ಷನ್– ಮಂಗಳೂರು ಸೆಂಟ್ರಲ್ (56641) ಎಕ್ಸ್‌ಪ್ರೆಸ್ ರೈಲಿನ ಸಂಚಾರವೂ ಸಂಪೂರ್ಣವಾಗಿ ರದ್ದಾಗಿದೆ.

ಸಂಚಾರ ಮೊಟಕು:ಮಾರ್ಚ್ 5ರಂಂದು ಸಂಚರಿಸುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ಸಿಟಿ ಜಂಕ್ಷನ್– ಕಾರವಾರ (16595) ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಕಬಕ ಪುತ್ತೂರು ನಿಲ್ದಾಣಕ್ಕೆ ಮೊಟಕುಗೊಳಿಸಲಾಗಿದೆ. ಮರುದಿನ ಈ ರೈಲಿನ ಮರು ಸಂಚಾರವು ಅಲ್ಲಿಂದಲೇ ಆರಂಭವಾಗಲಿದೆ.

ಮಾರ್ಚ್ 2ರಂದು ಯಶವಂತಪುರ– ಕಾರವಾರ ಎಕ್ಸ್‌ಪ್ರೆಸ್ (16515) ಮಂಗಳೂರು ಜಂಕ್ಷನ್‌ನಲ್ಲಿ ಒಂದು ಗಂಟೆ ನಿಲ್ಲಲಿದೆ. ಇದೇ ರೀತಿ, ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ಸಂಖ್ಯೆ ಬದಲು:ಮಂಗಳೂರು ಸೆಂಟ್ರಲ್– ಮಡಗಾಂವ್ ಜಂಕ್ಷನ್– ಮಂಗಳೂರು ಸೆಂಟ್ರಲ್ ದೈನಂದಿನ ಎಕ್ಸ್‌ಪ್ರೆಸ್ ರೈಲಿನ ಹಾಲಿ ಸಂಖ್ಯೆ 56640 / 56641 ಅನ್ನು 06602 / 06601 ಸಂಖ್ಯೆಗೆ ಬದಲಿಸಿರುವುದಾಗಿ ದಕ್ಷಿಣ ರೈಲ್ವೆ ತಿಳಿಸಿದೆ. ಇದು ಫೆ.18ರಿಂದಲೇ ಜಾರಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT