ಶಿರಸಿ: ‘ನಮ್ಮ ಶಕ್ತಿಯನ್ನು ಕ್ರೋಢಿಕರಿಸಿಕೊಂಡು, ಪ್ರಬಲವಾಗಿ ಇದ್ದುಕೊಂಡು ಶಾಂತಿ ಬಯಸಬೇಕು. ಪ್ರಬಲವಾಗಿದ್ದು ಶಾಂತಿಯುತವಾಗಿರುವುದೇ ನಿಜವಾದ ಶಾಂತಿ ಎಂಬುದನ್ನು ಜಗತ್ತಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ತೋರಿಸಿಕೊಟ್ಟಿದ್ದರು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ನಗರದ ದೀನದಯಾಳ ಸಭಾಭವನದಲ್ಲಿ ಗುರುವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಸುಶಾಸನ ದಿನ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್ ಆಡಳಿತದ ಆ ದಿನಗಳಲ್ಲಿ ಭಾರತದ ಬಗ್ಗೆ ಬಡ ದೇಶ, ಭ್ರಷ್ಟರು ಎಂಬಂತ ಅಭಿಪ್ರಾಯ ಜಗತ್ತಿನಲ್ಲೆಡೆ ಇತ್ತು. ಕಾಂಗ್ರೆಸ್ ಆಡಳಿತದ ಪರಿಣಾಮ ಭಾರತೀಯರಾದ ನಮಗೆ ನಮ್ಮ ಸ್ವಾಭಿಮಾನದ ಅರಿವೇ ಆಗಿರಲಿಲ್ಲ. ಕೇವಲ 2 ಸಂಸದರಿದ್ದ ಬಿಜೆಪಿಗೆ ಕಾರ್ಯಕರ್ತರನ್ನು ಹುರಿದುಂಬಿಸಿ ರಾಷ್ಟ್ರ ಕಾರ್ಯದಲ್ಲಿ ತೊಡಗುವಂತೆ ಮಾಡಿದವರು ಅಟಲ್ ಬಿಹಾರಿ ವಾಜಪೇಯಿ’ ಎಂದರು.

‘ಅಜಾತ ಶತ್ರು ಎಂಬ ಶಬ್ದಕ್ಕೆ ವಾಜಪೇಯಿ ಅವರದ್ದು ಹೇಳಿ ಮಾಡಿಸಿದ ವ್ಯಕ್ತಿತ್ವ. ಎಲ್ಲರನ್ನೂ ಒಗ್ಗೂಡಿಸಿದ ಶಕ್ತಿ, ವೈಚಾರಿಕ ಶಕ್ತಿಯಾಗಿ ಇಡೀ ದೇಶ ಬೆಳೆಸಿದವರು ಅವರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರ ದಬ್ಬಾಳಿಕೆಯ ಆಡಳಿತವನ್ನೂ ಸಮರ್ಥವಾಗಿ ನಿಭಾಯಿಸಿದರು. ದೇಶ ಮೊದಲು, ಬಳಿಕ ಪಕ್ಷ, ವ್ಯಕ್ತಿ ಎನ್ನುವ ಸ್ವಭಾವ ಅವರಿಂದಲೇ ಬಂದಿದೆ. ವಾಜಪೇಯಿ ಅವರ ನೇತೃತ್ವದಿಂದಾಗಿ ಪಾಪಿ ಪಾಕಿಸ್ತಾನಕ್ಕೆ ಪಾಠ ಕಲಿಸಿದ್ದಾರೆ. ಅಭಿವೃದ್ಧಿಯ ಕಲ್ಪನೆ ವಾಜಪೇಯಿ ಅವರಿಂದ ಆರಂಭವಾಗಿದೆ’ ಎಂದರು.

‘ಭಾರತ ದೇಶ ಇಂದು ಜಗತ್ತಿನ ಗಮನ ಸೆಳೆದಿದೆ. ಅಭಿವೃದ್ಧಿ, ಸಮರ್ಥ ನಾಯಕತ್ವದ ಮೂಲಕ ದೇಶ ಅಭಿವೃದ್ಧಿಯೆಡೆಗೆ ವೇಗವಾಗಿ ಸಾಗುತ್ತಿದೆ. ಆದರೆ, ಇಂದಿನ ಸಮರ್ಥ ಭಾರತಕ್ಕೆ ಬೀಜಾಂಕುರರಾದವರು ಅಟಲ್ ಬಿಹಾರಿ ವಾಜಪೇಯಿ ಆಗಿದ್ದರು’ ಎಂದರು.

ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ಹೆಗಡೆ, ‘ಅಟಲ್ ಅವರ 101ನೇ ಜನ್ಮದಿನಾಚರಣೆ ಅಂಗವಾಗಿ ನಾಳೆಯಿಂದ ಒಂದು ವಾರಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಒಂದು ಶಾಲೆ ಗುರುತಿಸಿ ವಿದ್ಯಾರ್ಥಿಗಳಿಂದ ಗಿಡ ನೆಟ್ಟು ಸಂರಕ್ಷಿಸುವ ಕಾರ್ಯಕ್ರಮವನ್ನು 17 ಮಂಡಲಗಳಲ್ಲಿ ನಡೆಸಲಿದ್ದೇವೆ. ವೀರರ ಬಲಿದಾನದ ಕುರಿತು ಬಾಲಕರಿಗೆ ತಿಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.

ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಮಾಜಿ ಶಾಸಕ ಸುನೀಲ ಹೆಗಡೆ, ಪ್ರಮುಖರಾದ ವೆಂಕಟೇಶ ನಾಯ್ಕ, ಗೋವಿಂದ ನಾಯ್ಕ, ಕೆ.ಜಿ. ನಾಯ್ಕ, ಶರ್ಮಿಳಾ ಮಾದನಗೇರಿ ಇದ್ದರು.

ಅರಣ್ಯ ಅತಿಕ್ರಮಣದ ಹೆಸರಿನಲ್ಲಿ ಬಡವರ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ನಡೆಸುತ್ತಿದೆ. ಸಮಸ್ಯೆಯನ್ನು ಹುಟ್ಟುಹಾಕುವವರು ಬಳಿಕ ಸಾಂತ್ವನದ ಮಾತು ಹೇಳುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.