‘ಕಾಡಾನೆಗಳು ಪ್ರತಿವರ್ಷ ಕಿರವತ್ತಿ ಅರಣ್ಯದ ಮೂಲಕ ಹಾದು ಮುಂಡಗೋಡ ಅರಣ್ಯ ವಲಯಕ್ಕೆ ಪ್ರವೇಶಿಸುತ್ತಿವೆ. ಗುಂಜಾವತಿ ಚವಡಳ್ಳಿ ಕಾತೂರ ಬೆಡಸಗಾಂವ್ ಸೇರಿದಂತೆ ಇನ್ನಿತರ ಅರಣ್ಯ ಪ್ರದೇಶಗಳಲ್ಲಿ ಸಂಚರಿಸಿ ಮರಳಿ ದಾಂಡೇಲಿ ಅಭಯಾರಣ್ಯದತ್ತ ತೆರಳುವುದು ವಾಡಿಕೆ. ಅಕ್ಟೋಬರ್ ತಿಂಗಳಿಂದ ಜನವರಿ ಅಂತ್ಯದವರೆಗೂ ಕಾಡಾನೆಗಳು ತಾಲ್ಲೂಕಿನಲ್ಲಿ ಸಂಚಾರ ನಡೆಸುತ್ತವೆ. ಈ ವರ್ಷ ಆಗಸ್ಟ್ ತಿಂಗಳಲ್ಲಿಯೇ ಕ್ಯಾತನಳ್ಳಿ ಪ್ರದೇಶದಲ್ಲಿ ಕಾಡಾನೆಗಳು ಪ್ರತ್ಯಕ್ಷಗೊಂಡು ಮುಂದೆ ಸಾಗಿದ್ದವು. ಇಲ್ಲಿಯವರೆಗೂ ಹೆಚ್ಚಿನ ಪ್ರಮಾಣದ ಬೆಳೆ ಹಾನಿ ವರದಿ ಆಗಿಲ್ಲ’ ಎಂದು ಎಸಿಎಫ್ ರವಿ ಹುಲಕೋಟಿ ಹೇಳಿದರು.