ಅಂಕೋಲಾ:‘ಜಗತ್ತು ವೇಗವಾಗಿ ಬೆಳೆಯುತ್ತಿದೆ ಅದರ ಜತೆ ನಾವೂಚಲಿಸಬೇಕಿದೆ. ವಿದೇಶಕ್ಕೆ ಹೋಗಿ ದೇಶ ಗೆಲ್ಲಬೇಕಿದೆ. ಅದಕ್ಕೆ ಮುಂದಿನ ತಲೆಮಾರಿನ ವ್ಯಾವಹಾರಿಕ ಕೇಂದ್ರ ಕಾರವಾರ– ಅಂಕೋಲಾ ಆಗಲಿದೆ’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ಪಟ್ಟಣ ಅಂಚೆ ಕಚೇರಿಯಲ್ಲಿ ಜಿಲ್ಲೆಯ ಮೊದಲ ಪಾಸ್‌ಪೋರ್ಟ್ಸೇವಾ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಕೇವಲ ರಾಜಕಾರಣದಿಂದ ನೋಡಿದರೆ ದೇಶದ ಅಭಿವೃದ್ಧಿಯಾಗುವುದಿಲ್ಲ. ದೂರದೃಷ್ಟಿಯ ಕಲ್ಪನೆ ಇರಬೇಕು. ಅಭಿವೃದ್ಧಿ ಗೊತ್ತಿರದ ಸೋಗಲಾಡಿತನದವರಿಗೆ ಪ್ರಶ್ನೆ ಕೇಳುವುದೇ ಬಂಡವಾಳವಾಗಿದೆ. ದೇಶದ ಜನಸಂಖ್ಯೆ ನಮ್ಮ ಆಸ್ತಿಯಾಗಿದೆ. ಈಗಾಗಲೇ ಜಗತ್ತಿನಲ್ಲಿ ದೇಶನಾಲ್ಕನೇ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ’ ಎಂದರು.
‘ಮುಂದಿನ ದಿನಗಳಲ್ಲಿ ಬೆಳಗಾವಿವಿಮಾನ ನಿಲ್ದಾಣದಿಂದ ಸರಕು ಸಾಗಣೆ ಆರಂಭವಾಲಗಿದೆ. ಅಂಕೋಲಾದಲ್ಲಿ ನಾಗರಿಕ ವಿಮಾನ ನಿಲ್ದಾಣ, ರೈಲ್ವೆ ಜಂಕ್ಷನ್ ಆಗಲಿದೆ. ಮುಂದಿನ ದಿನಗಳಿಗೆ ನಾವು ಕೃಷಿ ತಂತ್ರಜ್ಞಾನದಲ್ಲೂಬೆಳೆಯಬೇಕಾಗಿದೆ. ಜಗತ್ತಿಗೆ ಉತ್ತರಕನ್ನಡ ಜಿಲ್ಲೆಯು ಉತ್ತಮ ವೇದಿಕೆಯಾಗಲಿ’ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ಸಂಪೂರ್ಣ ಜಿಲ್ಲೆ ಅಭಿವೃದ್ಧಿಯಾಗಬೇಕು.ಇದಕ್ಕೆ ನಮ್ಮ ಜಿಲ್ಲೆಯ ಪ್ರತಿಭೆಗಳು ವಿದೇಶದಲ್ಲಿದ್ದರೂ ಈ ಜಿಲ್ಲೆಗೆ ತಮ್ಮದೇ ಕೊಡುಗೆ ನೀಡಬೇಕು’ಎಂದರು.
ಸಹಾಯಕಅಧಿಕಾರಿ ಕೆ.ಹರಿಶ್ಚಂದ್ರನ್ ಪ್ರಾಸ್ತಾವಿಕ ಮಾತನಾಡಿ, ‘ದೇಶದಲ್ಲಿ 440ಪಾಸ್‌ಪೋರ್ಟ್ ಸೇವಾಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸಾಮಾನ್ಯ ಅರ್ಜಿ ಶುಲ್ಕ ₹ 1,500 ಆಗಿದೆ. ಎಲ್ಲ ಮಾಹಿತಿಗಳೂ ಆನ್‌ಲೈನ್‌ನಲ್ಲಿಲಭ್ಯವಿವೆ. ಯಾವುದೇ ಏಜೆಂಟರ ಬಳಿ ಹೋಗುವ ಅಗತ್ಯವಿಲ್ಲ’ ಎಂದರು.
ಮುಖಂಡ ಸುನೀಲ್ ಹೆಗಡೆ ಮಾತನಾಡಿದರು. ಲಿಂಗೈಕ್ಯರಾದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಮತ್ತು ಜಿಲ್ಲೆಯ ದೋಣಿ ದುರಂತದಲ್ಲಿ ಮಡಿದವರಿಗೆಶ್ರದ್ಧಾಂಜಲಿ ಸಲ್ಲಿಸಲಾಯಿತು.ಲಕ್ಷ್ಮಿನಾರಾಯಣ ಗೌಡ ಮತ್ತು ಕಾರವಾರದ ದತ್ತಾತ್ರೇಯ ಶೆಟ್ಟಿ ಅವರಿಗೆ ಪಾಸ್‌ಪೋರ್ಟ್‌ಸೇವಾ ಕೇಂದ್ರದಿಂದ ಪ್ರಥಮ ಟೋಕನ್‌ಗಳನ್ನುನೀಡಲಾಯಿತು.
ವೀಣಾ ಶ್ರೀನಿವಾಸನ್ ಸ್ವಾಗತಿಸಿದರು. ಶೀತಲ್ ಸಂಗಡಿಗರು ಪ್ರಾರ್ಥಿಸಿದರು. ಜಿಲ್ಲೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.