ಬುಧವಾರ, ಫೆಬ್ರವರಿ 1, 2023
16 °C

ಸ್ಥಾನಿಕ ನಿರ್ದೇಶಕರಾಗಿ ಪ್ರಮೋದ ರಾಯಚೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ತಾಲ್ಲೂಕಿನ ಕೈಗಾ ಅಣು ವಿದ್ಯುತ್ ಉತ್ಪಾದನಾ ಕೇಂದ್ರದ ಒಂಬತ್ತನೇ ಸ್ಥಾನಿಕ ನಿರ್ದೇಶಕರಾಗಿ ಕನ್ನಡಿಗ ಪ್ರಮೋದ ಗೋವಿಂದಾಚಾರ್ಯ ರಾಯಚೂರು ನಿಯುಕ್ತಿಗೊಂಡಿದ್ದಾರೆ. ಈ ಮೊದಲು ಸ್ಥಾನಿಕ ನಿರ್ದೇಶಕರಾಗಿದ್ದ ರಾಜೇಂದ್ರ ಗುಪ್ತ ಮುಂಬೈಗೆ ವರ್ಗಾವಣೆಯಾಗಿದ್ದಾರೆ.

ಪ್ರಮೋದ ಅವರು ಪ್ರಸ್ತುತ ಕೈಗಾ ಅಣು ವಿದ್ಯುತ್ ಕೇಂದ್ರದ ಒಂದು ಮತ್ತು ಎರಡನೇ ಘಟಕಗಳ ಕೇಂದ್ರ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಕೈಗಾ ಸೇರಿದಂತೆ ದೇಶದ ವಿವಿಧ ಅಣು ವಿದ್ಯುತ್ ಘಟಕಗಳಲ್ಲಿ ಹಲವು ಹುದ್ದೆಗಳನ್ನು ಅವರು ನಿಭಾಯಿಸಿದ್ದಾರೆ.

ಕೈಗಾದಲ್ಲಿ ಪ್ರಸ್ತುತ 220 ಮೆಗಾವಾಟ್ ಸಾಮರ್ಥ್ಯದ ನಾಲ್ಕು ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. 700 ಮೆಗಾವಾಟ್ ಸಾಮರ್ಥ್ಯದ ಮತ್ತೆರಡು ಘಟಕಗಳ ನಿರ್ಮಾಣ ಆಗಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು