ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹60 ಲಕ್ಷ ವೆಚ್ಚದ ಜಲಮರುಪೂರಣ ಯೋಜನೆ

ರೋಟರಿ ಕ್ಲಬ್‌ನಿಂದ ಅನುಷ್ಠಾನ
Last Updated 24 ಸೆಪ್ಟೆಂಬರ್ 2018, 13:26 IST
ಅಕ್ಷರ ಗಾತ್ರ

ಶಿರಸಿ: ಮಳೆ ನೀರು ಸಂಗ್ರಹ, ಅಂತರ್ಜಲ ಮರುಪೂರಣಕ್ಕೆ ಒತ್ತು ನೀಡಿರುವ ಇಲ್ಲಿನ ರೋಟರಿ ಕ್ಲಬ್ ₹ 60 ಲಕ್ಷ ಅಂದಾಜು ವೆಚ್ಚದ ಜಲ ಉಳಿತಾಯ ಯೋಜನೆಗೆ ಸೋಮವಾರ ಚಾಲನೆ ನೀಡಿದೆ.

ಎಂಇಎಸ್ ವಾಣಿಜ್ಯ ಕಾಲೇಜಿನ ಆವರಣದಲ್ಲಿ ಅನುಷ್ಠಾನಗೊಳ್ಳಲಿರುವ ಉದ್ದೇಶಿತ ಯೋಜನೆಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ಗುದ್ದಲಿಪೂಜೆ ನೆರವೇರಿಸಿದರು. ಶಿಕ್ಷಣ ಸಂಸ್ಥೆಯ ನಾಲ್ಕು ಮಹಿಳಾ ವಸತಿ ನಿಲಯಗಳು ಸೇರಿದಂತೆ 75 ಎಕರೆ ಆವರಣ, ನೆರೆಯ ಕೆಎಚ್‌ಬಿ ಕಾಲೊನಿ, ವಿವೇಕಾನಂದ ನಗರ, ಶಾಂತಿ ನಗರ, ಸಹ್ಯಾದ್ರಿ ಕಾಲೊನಿ, ಆದರ್ಶನಗರ ಪ್ರದೇಶಗಳಿಗೆ ಈ ಯೋಜನೆಯ ಪ್ರಯೋಜನ ದೊರಕಲಿದೆ.

ರೋಟರಿ ಅಧ್ಯಕ್ಷ ಆರ್‌.ಎ.ಖಾಜಿ, ಕಾರ್ಯದರ್ಶಿ ಮಹೇಶ ತೇಲಂಗ, ಖಜಾಂಚಿ ಶ್ರೀಧರ ಹೆಗಡೆ, ಪ್ರಮುಖರಾದ ಪ್ರವೀಣ ಕಾಮತ, ಶಿವರಾಮ ಕೆ.ವಿ, ಬಿ.ಡಿ.ಕಾರಂತ, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಫ್ಲೇವಿಯಾ ರೋಡ್ರಿಗ್ಸ್, ಮಧುಮತಿ ಹೆಗಡೆ, ಶಿವಾನಂದ ಕಳವೆ, ಜಿ.ವಿ.ಹೆಗಡೆ, ಶ್ರೀಕಾಂತ ಹೆಗಡೆ, ರಾಮಚಂದ್ರ ಪ್ರಭು, ಗೌರವ ಸಲಹೆಗಾರ ಅರುಣ ನಾಯಕ ಇದ್ದರು. ಪ್ರವೀಣ ಕಾಮತ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಪಿ.ಶೆಟ್ಟಿ ಸ್ವಾಗತಿಸಿದರು.

ಯೋಜನೆ ವಿವರ:

ಒಟ್ಟು ಪ್ರದೇಶ 75 ಎಕರೆ
ನೀರು ಸಂಗ್ರಹ ಟ್ಯಾಂಕ್ 150
ಒಟ್ಟು ನೀರಿನ ಸಂಗ್ರಹದ ಅಂದಾಜು 50 ಲಕ್ಷ ಲೀಟರ್
ಜಲಮರುಪೂರಣ ಸರೋವರ 02
ಅಂತರ್ಜಲ ಮರುಪೂರಣ ಬಾವಿ 16
ಮರುಪೂರಣ ಹೊಂಡಗಳು 100

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT