ದಶಕದ ಹಿಂದೆಯೂ ನಡೆದಿತ್ತು ಹೋರಾಟ
ದಶಕಗಳ ಹಿಂದೆ ಶರಾವತಿ ನದಿಗೆ ಅಡ್ಡಲಾಗಿ ಗೇರುಸೊಪ್ಪದಲ್ಲಿ ‘ಶರಾವತಿ ಟೇಲರೇಸ್’ ಅಣೆಕಟ್ಟೆ ನಿರ್ಮಾಣವನ್ನು ವಿರೋಧಿಸಿ ಅಂದು ಪ್ರತಿಭಟನೆ ವ್ಯಕ್ತವಾಗಿತ್ತು. ಸಾಹಿತಿ ಶಿವರಾಮ ಕಾರಂತ ಸಾಮಾಜಿಕ ಕಾರ್ಯಕರ್ತೆ ಕುಸುಮಾ ಸೊರಬ ಸೇರಿದಂತೆ ನೂರಾರು ಜನರು ವರ್ಷಗಳ ಕಾಲ ಶರಾವತಿ ಕೊಳ್ಳದ ಅರಣ್ಯ ಹಾಗೂ ಪರಿಸರ ರಕ್ಷಣೆಗಾಗಿ ಪ್ರತಿಭಟನೆ ನಡೆಸಿದ್ದರು. ವಿರೋಧಿಗಳು ನ್ಯಾಯಾಲಯದ ಮೆಟ್ಟಿಲು ಕೂಡ ಏರಿದ್ದರು. ಇದೇ ಶರಾವತಿ ಕೊಳ್ಳದಲ್ಲಿ ಇದೀಗ ‘ಪಂಪ್ಡ್ ಸ್ಟೊರೇಜ್’ ಹೆಸರಿನ ಮತ್ತೊಂದು ಯೋಜನೆ ಸ್ಥಳೀಯರ ನಿದ್ದೆಗೆಡಿಸಿದೆ.