ಹೊನ್ನಾವರ: ಶರಾವತಿ ಭೂಗತ ವಿದ್ಯುತ್ ಯೋಜನೆ (ಶರಾವತಿ ಪಂಪ್ಡ್ ಸ್ಟೋರೇಜ್) ವಿರೋಧಿಸಿ ಹಾಗೂ ಜಿಲ್ಲೆಯಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಬುಧವಾರ ಪಾದಯಾತ್ರೆ ಆರಂಭಗೊಂಡಿದೆ.

ಗೇರುಸೊಪ್ಪದ ವನವಾಸಿ ಸೀತಾರಾಮಚಂದ್ರ ದೇವಸ್ಥಾನದಿಂದ ಆರಂಭಗೊಂಡಿರುವ ಪಾದಯಾತ್ರೆ ಹಡಿನಬಾಳ ತಲುಪಿದ್ದು, ಅಲ್ಲಿಂದ ಗುರುವಾರ ಪುನರಾರಂಭಗೊಂಡು ಹೊನ್ನಾವರದ ತಹಶೀಲ್ದಾರ ಕಚೇರಿಯವರೆಗೆ ಸಾಗಲಿದೆ.

ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಆಗಬಹುದು ಎಂಬ ಕಾರಣ ನೀಡಿ ಪೊಲೀಸರು ನೀಡಿದ ವರದಿಯಾಧರಿಸಿ ತಹಶೀಲ್ದಾರ ಪ್ರವೀಣ ಕರಾಂಡೆ ಪಾದಯಾತ್ರೆಗೆ ಅನುಮತಿ ನಿರಾಕರಿಸಿ ಹೋರಾಟ ಸಮಿತಿಗೆ ಪತ್ರ ನೀಡಿದ್ದರು. ತಹಶೀಲ್ದಾರರು ಈ ಹಿಂದೆ ಅನುಮತಿ ನೀಡಿ ರಾಜಕೀಯ ಒತ್ತಡದ ಕಾರಣಕ್ಕೆ ಪಾದಯಾತ್ರೆಗೆ ಅನುಮತಿ ನಿರಾಕರಿಸಿರುವುದನ್ನು ಪ್ರಶ್ನಿಸಿ ಪತ್ರಿಕಾ ಹೇಳಿಕೆ ನೀಡಿದ್ದ ಹೋರಾಟ ಸಮಿತಿಯ ಅಧ್ಯಕ್ಷ ಮಾಸ್ತಪ್ಪ ನಾಯ್ಕ, ನಿಗಿದಿಯಾಗಿರುವುಂತೆ ಪಾದಯಾತ್ರೆ ನಡೆಸುವುದು ಶತಃಸಿದ್ಧ' ಎಂದು ಸವಾಲು ಹಾಕಿದ್ದರು.

ಪಾದಯಾತ್ರೆ ಉದ್ಘಾಟಿಸಿದ ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ ಮಾತನಾಡಿ, ಅಭಿವೃದ್ಧಿಯ ಹೆಸರಲ್ಲಿ ಶರಾವತಿ ನದಿ, ಪರಿಸರ ಹಾಗೂ ಜನಜೀವನದ ಮೇಲೆ ನಡೆದಿರುವ ದಾಳಿಯನ್ನು ತಡೆಗಟ್ಟಲು ಸಂಕಲ್ಪಿಸಿದಂತೆ ಪಾದಯಾತ್ರೆಗೆ ಚಾಲನೆ ನೀಡಿದ್ದೇನೆ. ಪಾದಯಾತ್ರೆ ಕಾನೂನು ಚೌಕಟ್ಟಿನಲ್ಲಿ ಶಾಂತಿಯುತವಾಗಿ ನಡೆಯಲಿದೆ' ಎಂದು ತಿಳಿಸಿದರು.

ಮಾಸ್ತಪ್ಪ ನಾಯ್ಕ ಮಾತನಾಡಿ, ಹೋರಾಟ ಮಾಡದೇ ಏನನ್ನೂ ಪಡೆಯಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ಸಂಘಟಿತ ಹೋರಾಟಕ್ಕೆ ಜನರ ಬೆಂಬಲವಿದೆ' ಎಂದು ಹೇಳಿದರು.

ರೈತ ಮುಖಂಡ ಯು.ಎ.ಪಾಟೀಲ, ಕಮಿಷನ್ ಆಶೆಗೆ ಶರಾವತಿ ಯೋಜನೆ ಜಾರಿಗೆ ಕೆಲವರು ಮುಂದಾಗಿದ್ದಾರೆ' ಎಂದು ಆರೋಪಿಸಿದರು. ಪಾದಯಾತ್ರೆಯ ಮೊದಲ ದಿನ ನೂರಾರು ಜನರು ಪಾಲ್ಗೊಂಡಿದ್ದು, ಶಾಂತಿಯುತವಾಗಿ ನಡೆದಿದೆ.