ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಜುಲೈ 3ಕ್ಕೆ ಕದಂಬ ಸಸ್ಯಸಂತೆ ಉದ್ಘಾಟನೆ

Published 1 ಜುಲೈ 2023, 13:45 IST
Last Updated 1 ಜುಲೈ 2023, 13:45 IST
ಅಕ್ಷರ ಗಾತ್ರ

ಶಿರಸಿ: ರೈತರಿಗೆ ವಿವಿಧ ಜಾತಿಯ ಉತ್ತಮ ಗುಣಮಟ್ಟದ ಗಿಡಗಳನ್ನು ಒದಗಿಸುವ ಉದ್ದೇಶದಿಂದ ನಗರದ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯು ಕದಂಬ ಸಸ್ಯ ಸಂತೆ ಪ್ರಾರಂಭಿಸಲಿದ್ದು, ಸಂಸ್ಥೆಯ ಆವರಣದಲ್ಲಿ ಜುಲೈ 3ರ ಬೆಳಿಗ್ಗೆ 11 ಗಂಟೆಗೆ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಉದ್ಘಾಟಿಸುವರು. 

ಕದಂಬ ಸಸ್ಯ ಸಂತೆಯು ಜೈವಿಕ ಇಂಧನ ಗಿಡಗಳನ್ನು ಆಸಕ್ತ ರೈತರಿಗೆ ಒದಗಿಸುವದರ ಮೂಲಕ ಪರ‍್ಯಾಯ ಇಂಧನದ ಗಿಡಗಳನ್ನು ಬೆಳೆಯಲು ರೈತರನ್ನು ಪ್ರೋತ್ಸಾಹಿಸುತ್ತಿದೆ. ಸ್ಥಳೀಯ ರೈತರ ಮನೆಗಳಲ್ಲಿರುವ ವಿಶೇಷ ತಳಿಯ ವಿವಿಧ ಜಾತಿಯ ಗಿಡಗಳನ್ನು ಪ್ರಚುರಪಡಿಸುವುದು, ಮೌಲ್ಯವರ್ಧನೆಗೆ ಯೋಗ್ಯವಾದ ವಿಶೇಷ ತಳಿಯ ಹಲಸಿನ ಗಿಡಗಳ ಮಾರಾಟಕ್ಕೆ ಅವಕಾಶ ಮಾಡಿಕೊಡುವ ಉದ್ದೇಶ ಹೊಂದಿದೆ. 

ಸತತ 12 ವರ್ಷಗಳಿಂದ ನಡೆಯುತ್ತಿರುವ ಸಸ್ಯಸಂತೆಯಲ್ಲಿ ಉತ್ತಮ ಗುಣಮಟ್ಟದ ಜಾಯಿಕಾಯಿ, ಲವಂಗ, ಗೇರು, ಮಾವು, ನೆಲ್ಲಿ, ಕಾಳುಮೆಣಸು, ಕೊಕ್ಕೊ, ಕಾಫಿ, ಅಪ್ಪೆ ಮಾವು, ಹಲಸು ಮುಂತಾದ ಗಿಡಗಳು ದೊರೆಯುತ್ತವೆ ಹಾಗೂ ರೈತರು ತಮ್ಮಲ್ಲಿರುವ ಯಾವುದೇ ಉತ್ತಮ ಗಿಡಗಳನ್ನು ಮಾರಾಟಕ್ಕೆ ತರಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯನ್ನು ಸಂಪರ್ಕಿಸಲು ಕೋರಿದೆ

ದೂರವಾಣಿ ಸಂಖ್ಯೆ : 08384233163 / 9480622572

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT