ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಕೆಡಿಸಿಸಿ ಬ್ಯಾಂಕ್‍ಗೆ ₹23.04 ಕೋಟಿ ನಿವ್ವಳ ಲಾಭ

ಸಾಲ ವಸೂಲಾತಿಯಲ್ಲಿ ಗಣನೀಯ ಪ್ರಗತಿ: ಶಿವರಾಮ ಹೆಬ್ಬಾರ
Published : 16 ಸೆಪ್ಟೆಂಬರ್ 2024, 14:19 IST
Last Updated : 16 ಸೆಪ್ಟೆಂಬರ್ 2024, 14:19 IST
ಫಾಲೋ ಮಾಡಿ
Comments

ಶಿರಸಿ: ‘ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ (ಕೆಡಿಸಿಸಿ) ಬ್ಯಾಂಕ್ 2023-24ನೇ ಸಾಲಿನಲ್ಲಿ ₹23.04 ಕೋಟಿ ನಿವ್ವಳ ಲಾಭಗಳಿಸಿದೆ. ಎನ್.ಪಿ.ಎ ಪ್ರಮಾಣ ಶೇ 2.01ಕ್ಕೆ ಇಳಿದಿರುವುದು ಪ್ರಗತಿಯ ಸಂಕೇತವಾಗಿದೆ’ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಹೊಸದಾಗಿ 21 ಶಾಖೆಗಳನ್ನು ಆರಂಭಿಸಲಾಗಿದೆ. ಬ್ಯಾಂಕ್ ಶೇರು ಬಂಡವಾಳ ₹110.39 ಕೋಟಿಗಳಿಂದ ₹131.28 ಕೋಟಿಗೆ, ನಿಧಿಗಳು ₹242.31 ಕೋಟಿಗಳಿಂದ ₹324.08 ಕೋಟಿಗೆ ಹಾಗೂ ಠೇವುಗಳು ₹3,057.08 ಕೋಟಿಗಳಿಂದ ₹3,330.41 ಕೋಟಿಗೆ ಏರಿಕೆಯಾಗಿದೆ. ಒಟ್ಟೂ ಆದಾಯ ₹392.10 ಕೋಟಿ ಆಗಿದೆ. ₹3097.95  ಕೋಟಿ ಸಾಲಬಾಕಿ ಇದೆ. ದುಡಿಯುವ ಬಂಡವಾಳ ₹4515.81 ಕೋಟಿ ತಲುಪಿದೆ’ ಎಂದರು. 

‘₹2,855.64 ಕೋಟಿ ಸಾಲ ವಿತರಿಸಲಾಗಿದೆ. ಸಹಕಾರ ಸಂಘಗಳಿಂದ ₹1,535.01 ಕೋಟಿ ಸಾಲ ಬರಬೇಕಿದ್ದು, ₹1562.93 ಇತರರಿಂದ ಬರತಕ್ಕ ಬಾಕಿ ಇದೆ. ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಗೆ ಸಂಬಂಧಿಸಿದಂತೆ ₹41.04 ಕೋಟಿ ವಿಮಾ ಮೊತ್ತ ಈವರೆಗೆ ನೇರವಾಗಿ ರೈತರ ಆಧಾರ್ ಲಿಂಕ್ ಹೊಂದಿದ ಉಳಿತಾಯ ಖಾತೆಗಳಿಗೆ ಜಮಾ ಆಗಿದೆ. ವ್ಯವಸಾಯ ಸಾಲ ವಸೂಲಿ ಪ್ರಮಾಣ ಶೇ 98.02 ಆಗಿದೆ. ಯಶಸ್ವಿನಿ ಯೋಜನೆಯಡಿ ಜಿಲ್ಲೆಯಿಂದ ₹1.57 ಕೋಟಿ ಪ್ರೀಮಿಯಂನ್ನು ಯಶಸ್ವಿನಿ ಟ್ರಸ್ಟ್‌ಗೆ ವರ್ಗಾಯಿಸಲಾಗಿದೆ’ ಎಂದರು.

ಉಪಾಧ್ಯಕ್ಷ ಮೋಹನದಾಸ ನಾಯಕ, ನಿರ್ದೇಶಕರಾದ ಎಸ್.ಎಲ್.ಘೋಟ್ನೇಕರ, ಜಿ.ಆರ್.ಹೆಗಡೆ ಸೋಂದಾ, ಆರ್.ಎಂ.ಹೆಗಡೆ ಬಾಳೇಸರ, ರಾಘವೇಂದ್ರ ಶಾಸ್ತ್ರಿ, ಎಲ್.ಟಿ.ಪಾಟೀಲ್, ಕೃಷ್ಣ ದೇಸಾಯಿ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ರಾಮಕೃಷ್ಣ ಹೆಗಡೆ ಕಡವೆ, ತಿಮ್ಮಯ್ಯ ಹೆಗಡೆ, ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಭಟ್ ಇದ್ದರು. 

ಶಿವರಾಮ ಹೆಬ್ಬಾರ್
ಶಿವರಾಮ ಹೆಬ್ಬಾರ್

ವಾಹನ ಪರಿಶೀಲನೆಗೆ ಏಜೆನ್ಸಿ

‘ವಾಹನಗಳ ಸಾಲ ಪಡೆಯುವ ವೇಳೆ ಗ್ರಾಹಕರು ಹೊಸ ವಾಹನ ಖರೀದಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಪರಿಶೀಲನೆಗೆ ಏಜೆನ್ಸಿ ನೇಮಕ ಮಾಡಲಾಗಿದೆ’ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ತಿಳಿಸಿದರು. ‘ಕೆಲ ಸಹಕಾರ ಸಂಘಗಳಲ್ಲಿ ಕಾರ್ಯದರ್ಶಿಗಳ ತಪ್ಪಿನಿಂದ ಅವ್ಯವಹಾರ ನಡೆದಿದೆ. ಅಂತವರ ಮೇಲೆ ಈಗಾಗಲೆ ಕ್ರಮ ಕೈಗೊಳ್ಳಲಾಗಿದೆ. ವಾಹನ ಖರೀದಿ ನೆಪದಲ್ಲಿ ವಂಚಿಸಿರುವವರ ವಿರುದ್ಧವೂ ತನಿಖೆ ನಡೆಯುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT