ಹಳಿಯಾಳ: ‘ಪತ್ರಕರ್ತರು ಸಮಾಜ ತಿದ್ದುವ ಬಹುದೊಡ್ಡ ಅಸ್ತ್ರ, ಸದಾ ಸಮಾಜಕ್ಕೆ ಕಣ್ಣಾಗಿ ಇರುತ್ತಾರೆ’ ಎಂದು ಹೊನ್ನಾವರದ ಸಾಹಿತಿ ಸಂದೀಪ್ ಎಸ್.ಭಟ್ ಹೇಳಿದರು.

ಇಲ್ಲಿನ ಕೆಎಲ್ಎಸ್ ಪದವಿ ಪೂರ್ವ ಮಹಾವಿದ್ಯಾಲಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಳಿಯಾಳ ಘಟಕ, ಪತ್ರಕರ್ತರ ಸಂಘದ ಸಹಯೋಗದೊಂದಿಗೆ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಮಂಗಳವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕೆ.ಎಲ್.ಎಸ್ ಕಾಲೇಜಿನ ಪ್ರಾಚಾರ್ಯ ಶ್ರೀನಿವಾಸ್ ಪ್ರಭು ಮಾತನಾಡಿದರು.

ಪತ್ರಕರ್ತ ಯೋಗರಾಜ ಎಸ್.ಕೆ ಮಾತನಾಡಿ, ‘ದೈನಂದಿನ ಪತ್ರಿಕೆಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಅದರಿಂದ ಭವಿಷ್ಯದ ಜೀವನಕ್ಕೆ ಸಹಕಾರಿಯಾಗುತ್ತದೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಹಳಿಯಾಳ ಘಟಕದ ಅಧ್ಯಕ್ಷೆ ಸುಮಂಗಲಾ ಅಂಗಡಿ ಮಾತನಾಡಿ, ‘ಪತ್ರಕರ್ತರು ಸಮಾಜದಲ್ಲಿ ತಪ್ಪುಗಳನ್ನು ತಿದ್ದಲು ಕ್ರಿಯಾಶೀಲರಾಗಿ ಕಾಯಕ ಮಾಡುತ್ತಾರೆ’ ಎಂದರು.

ಟ್ರಸ್ಟ್ನ ಆಡಳಿತ ಅಧಿಕಾರಿ ಪ್ರಕಾಶ ಪ್ರಭು, ಪತ್ರಕರ್ತ ಓರವಿಲ್ ಫರ್ನಾಂಡಿಸ್, ಮಂಜುನಾಥ್ ಶೇರಖಾನೆ, ಸಂಜು ಕೋಳೂರು, ಶಿವಾನಂದ ಜಿವೋಜಿ, ದೇವಿದಾಸ ನಾಯ್ಕ, ಕೃಷ್ಣಪ್ಪ ಕಟ್ಟಿ, ಮಧುರಾ ಬಡಿಗೇರ, ದಿವ್ಯಾ ಮಹಾಜನ, ಸಾಹಿತಿ ಕಾಳಿದಾಸ ಬಡಿಗೇರ, ಉಪನ್ಯಾಸಕರಾದ ದಿನೇಶ್ ನಾಯ್ಕ, ಮಂಜುನಾಥ ಭೋವಿ, ಶಾಂತಾರಾಮ ಚಿಬ್ಬುಲಕರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.