ಕಾರವಾರ: ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಈಗ ‘ರೆಕ್ಕೆ’ ಮೂಡಿದೆ. ಕಲಾವಿದರೊಬ್ಬರ ಪರಿಕಲ್ಪನೆಯ ಈ ಕಲಾಕೃತಿಗೆ ಬಣ್ಣ ಬಣ್ಣದ ಗರಿಗಳಿವೆ.

ನಗರದಲ್ಲಿ ಪರಿಸರ ಸೌಂದರ್ಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಬೆಟರ್ ಕಾರವಾರ’ ಸಮೂಹದಲ್ಲಿರುವ ಕಲಾವಿದ ದೀಪೇಶ ನಾಯ್ಕ ಈ ಚಿತ್ರವನ್ನು ರಚಿಸಿದ್ದಾರೆ. ಈಚೆಗೆ ಚೆನ್ನೈನಲ್ಲಿ ನಡೆದ ‘ಅಖಿಲ ಭಾರತ ಚಿತ್ರಕಲೆ ಸ್ಪರ್ಧೆ 2020’ರಲ್ಲಿ ಅವರು ಈ ಕಲಾಕೃತಿಗೆ ಪ್ರಥಮ ಬಹುಮಾನ ಗಿಟ್ಟಿಸಿಕೊಂಡರು.

ಟ್ಯಾಗೋರ್ ಕಡಲತೀರದ ಹೋಟೆಲ್ ಬಳಿಯ ಗೋಡೆಯಲ್ಲಿ ಈ ಚಿತ್ರವಿದೆ. ‘ಐ ಲವ್ ಕಾರವಾರ’ ಎಂಬ ವಾಕ್ಯದ ಕೆಳಗೆ ನಿಂತು ಸ್ಥಳೀಯರು, ಪ್ರವಾಸಿಗರು ಫೋಟೊ ತೆಗೆದುಕೊಳ್ಳಲು ಅವಕಾಶವಿದೆ. ನಗರಸಭೆ ಮತ್ತು ಕಡಲತೀರಅಭಿವೃದ್ಧಿ ಪ್ರಾಧಿಕಾರದೊಂದಿಗೆ ಕೆಲಸ ಮಾಡಿದ ತಂಡದಲ್ಲಿ ಸೂರಜ್ ಗೋವೆಕರ್, ಪ್ರಸಾದ್ ಸಾದಿಯೆ, ಅಮನ್ ಶೇಖ್, ನಿತೇಶ್ ನಾಯಕ್ ಉಮಾಶಂಕರ್ ಇದ್ದರು.

ಈ ಬಗ್ಗೆ ಮಾತನಾಡಿದ ತಂಡದ ಸದಸ್ಯ ಸೂರಜ್, ‘ನಗರಸೌಂದರ್ಯ ಕುರಿತು ನಾವು ನೋಡುವ ವಿಧಾನವನ್ನು ಸುಧಾರಿಸುವ ಒಂದು ಪ್ರಯತ್ನ ಇದಾಗಿದೆ. ನಾಗರಿಕರ, ಪ್ರವಾಸಿಗರ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಸಂಕೇತವಾಗಿರೆಕ್ಕೆಗಳ ಕಲಾಕೃತಿಯನ್ನು ರಚಿಸಿದ್ದೇವೆ’ ಎಂದರು.

‘ಪ್ರವಾಸಿಗರು ಈ ಕಲಾಕೃತಿಯೊಂದಿಗೆ ನಿಂತು ಫೋಟೊ ತೆಗೆದುಕೊಂಡು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದರೆ ನಗರದ ಬಗ್ಗೆ ಮತ್ತಷ್ಟು ಪ್ರಚಾರ ಸಾಧ್ಯವಾಗುತ್ತದೆ. ಈ ಮೂಲಕ ಪ್ರವಾಸೋದ್ಯಮದ ಬೆಳವಣಿಗೆಗೆ ಸಹಕಾರಿಯಾಗುತ್ತದೆ’ ಮತ್ತೊಬ್ಬಸದಸ್ಯ ಪ್ರಸಾದ್ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.