ಕಾರವಾರ: ಕಾಳಿ ನದಿಯ ಅಕ್ಕಪಕ್ಕದ ದಂಡೆಗಳಲ್ಲಿರುವ ತಾಲ್ಲೂಕಿನ ಉಳಗಾ ಮತ್ತು ಕೆರವಡಿ ಗ್ರಾಮಗಳ ಜನರಿಗೆ ನದಿ ದಾಟಿ ಸಾಗಲು ಅನುಕೂಲವಾಗಿದ್ದ ಬಾರ್ಜ್ನ್ನು ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಕ್ಕೆ ಸ್ಥಳಾಂತರಿಸಿರುವುದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.

‘ಮೂರು ದಶಕಗಳಿಂದ ಕಾಳಿ ನದಿ ದಾಟಲು ಎರಡೂ ಬದಿಯ ಗ್ರಾಮಸ್ಥರಿಗೆ ಬಾರ್ಜ್ ಆಸರೆಯಾಗಿತ್ತು. ಬಾರ್ಜ್ ಸ್ಥಳಾಂತರದಿಂದ ನದಿಯ ಎರಡು ದಂಡೆಯ ಹಲವು ಗ್ರಾಮಗಳ ಜನರಿಗೆ ಸಂಪರ್ಕಕ್ಕೆ ಪರ್ಯಾಯ ಸೌಲಭ್ಯ ಇಲ್ಲದಂತಾಗಿದೆ’ ಎಂದು ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರನ್ನು ಭೇಟಿಯಾಗಿ ದೂರಿದರು.

‘ಕೆರವಡಿ, ದೇವಳಮಕ್ಕಿ ಗ್ರಾಮಗಳ ವಿದ್ಯಾರ್ಥಿಗಳು ಉಳಗಾದಲ್ಲಿರುವ ಶಾಲೆ, ಕಾಲೇಜುಗಳನ್ನು ತಲುಪಲು ಬಾರ್ಜ್ ಅಗತ್ಯವಿದೆ. ಉಳಗಾ, ಹಳಗಾ, ಅಂಬ್ರಾಯಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಕೈಗಾ, ಮಲ್ಲಾಪುರಕ್ಕೆ ತೆರಳಲು ಇದು ಅನುಕೂಲವಾಗಿದೆ. ನಿತ್ಯ ಸರಿ ಸುಮಾರು 500 ರಷ್ಟು ಜನರು ಬಾರ್ಜ್ ಬಳಸಿ ಸಂಚರಿಸುತ್ತಿದ್ದಾರೆ’ ಎಂದೂ ಹೇಳಿದರು.

‘ಬಾರ್ಜ್ ಇಲ್ಲದಿದ್ದರೆ ನದಿಯ ಆಚೆಯ ದಡವನ್ನು ತಲುಪಲು ಸುಮಾರು 30 ಕಿ.ಮೀ ಸುತ್ತುಬಳಸಿ ಸಂಚರಿಸಬೇಕಾಗಿದೆ. ವಿದ್ಯಾರ್ಥಿಗಳಿಗೆ ಇದರಿಂದ ಸಮಸ್ಯೆ ಉಂಟಾಗಲಿದೆ’ ಎಂದು ವಿವರಿಸಿದರು.

‘ಬಾರ್ಜ್ ತಾತ್ಕಾಲಿಕವಾಗಿ ಸ್ಥಳಾಂತರವಾಗಿದೆ ಪ್ರವಾಹ ಸ್ಥಿತಿ ಇಳಿಕೆಯಾದ ಬಳಿಕ ಪುನಃ ತರಲಾಗುವುದು. ಆವರೆಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ಅನುಕೂಲಕ್ಕೆ ಪರ್ಯಾಯ ವಾಹನದ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಗ್ರಾಮಸ್ಥರಾದ ದೀಪಕ ಹಳದಿಪುರ, ಸುನೀಲ ನಾಯ್ಕ, ದೀಕ್ಷಿತಾ ಹಳದಿಪುರ, ಚಂದಾ ನಾಯ್ಕ, ರಾಮಚಂದ್ರ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.