ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಬ್ಯೂಟಿ ಪಾರ್ಲರ್ ಮೇಲೆ ಕ್ರಮಕ್ಕೆ ಒತ್ತಾಯ

Published 28 ನವೆಂಬರ್ 2023, 15:38 IST
Last Updated 28 ನವೆಂಬರ್ 2023, 15:38 IST
ಅಕ್ಷರ ಗಾತ್ರ

ಕಾರವಾರ: ‘ಅಂಕೋಲಾ ಪಟ್ಟಣದಲ್ಲಿ ನೇಪಾಳಿ ಮಹಿಳೆಯೊಬ್ಬರು ಅನಧಿಕೃತವಾಗಿ ನಡೆಸುತ್ತಿರುವ ಬ್ಯೂಟಿ ಪಾರ್ಲರ್ ಮೇಲೆ ಕ್ರಮ ಜರುಗಿಸಬೇಕು’ ಎಂದು ಆಲ್ ಕರ್ನಾಟಕ ಬ್ಯೂಟಿಶಿಯನ್ ಅಸೋಸಿಯೇಶನ್ ಅಧ್ಯಕ್ಷೆ ಎನ್.ನಾಗವೇಣಿ ಒತ್ತಾಯಿಸಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಪರಾಧ ಹಿನ್ನೆಲೆಯುಳ್ಳ ಮಹಿಳೆಯೊಬ್ಬರು ನಿಯಮಗಳನ್ನು ಗಾಳಿಗೆ ತೂರಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆ. ಈ ದೇಶದ ಪೌರತ್ವ ಹೊಂದಿಲ್ಲದಿದ್ದರೂ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿರುವ ಶಂಕೆ ಇದೆ. ಈ ಬಗ್ಗೆಯೂ ದೂರು ನೀಡಲಾಗಿದ್ದು ಸೂಕ್ತ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.

‘ಅನಧಿಕೃತ ಪಾರ್ಲರ್ ವಿರುದ್ಧ ದೂರು ಸಲ್ಲಿಕೆಯಾದ ಬಳಿಕ ಎರಡು ತಿಂಗಳು ಸ್ಥಗಿತವಾಗಿತ್ತು. ಈಗ ಪುನಃ ಆರಂಭಿಸಿದ್ದಾರೆ. ಬ್ಯೂಟಿ ಪಾರ್ಲರ್ ತೆರೆಯಲು ಪುರಸಭೆಗೆ ಅರ್ಜಿ ಸಲ್ಲಿಸಿದರೆ ಸ್ಥಳೀಯರಿಗೆ ಬೇಗನೆ ಅವಕಾಶ ಸಿಗುತ್ತಿಲ್ಲ. ಹೊರಗಿನಿಂದ ಬಂದವರಿಗೆ ಹೇಗೆ ಬೇಗನೆ ಅನುಮತಿ ಸಿಗುತ್ತಿದೆ ಎಂಬುದರ ಬಗ್ಗೆಯೂ ಹಿರಿಯ ಅಧಿಕಾರಿಗಳು ಪರಿಶೀಲಿಸಬೇಕು’ ಎಂದು ಒತ್ತಾಯಿಸಿದರು.

ಶೋಭಾ ಕಾಂಬ್ಳೆ, ಸುವಿಧಾ ನಾಯಕ, ಸುವರ್ಣಾ ಪಾಲನಕರ್, ಶ್ವೇತಾ ಶೇಟ್, ಅಂಜಲಿ ರಾಯ್ಕರ್, ದೀಪಾಲಿ ನಾಯ್ಕ, ಫೈರೋಜಾ ಶೇಖ್, ಶೋಭಾ ಗೌಡ, ನಾಗರತ್ನಾ ಭಟ್, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT