ರೈತರಿಗೆ ಎದುರಾದ ಸಂಕಷ್ಟ ಪರಿಹರಿಸಲು ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರಿನ ಯೋಜನೆಯಿಂದ ನೀರನ್ನು ನೀಡುವ ಸಂಬಂಧ ಸಭೆ ನಡೆಸುವ ಜತೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗುವುದು
ಬಿಬಿ ಆಯಿಷಾ ಖಾಸಿಂ ಸಾಬ್ ಬನವಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಬನವಾಸಿ ಹೋಬಳಿಯನ್ನು ಒಳಗೊಂಡು ಇಡೀ ಯಲ್ಲಾಪುರ ವಿಧಾನಸಭಾ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿ ಅಧಿಕ ಮೊತ್ತದ ಪರಿಹಾರ ನೀಡುವಂತೆ ಸಿಎಂಗೆ ಮನವಿ ನೀಡಲಾಗಿದೆ
ಶಿವರಾಮ ಹೆಬ್ಬಾರ್ ಶಾಸಕ
ಬರಗಾಲದ ಭಯ
ನಾಲ್ಕೈದು ವರ್ಷಗಳ ಹಿಂದೆ ಸತತ ಬರಗಾಲದ ಪರಿಸ್ಥಿತಿ ಉಂಟಾಗಿತ್ತು. ಆ ವೇಳೆ ರೈತರು ಬೆಳೆ ಬೆಳೆಯಲಾಗದೇ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸಿದ್ದರು. ಪ್ರಸಕ್ತ ಸಾಲಿನಲ್ಲಿ ಶೇ 70ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದ್ದು ಈ ವರ್ಷವೂ ಬರಗಾಲದ ಸ್ಥಿತಿ ಉಂಟಾಗುವ ವಾತಾವರಣ ನಿರ್ಮಾಣವಾಗಿದೆ.