ಯಲ್ಲಾಪುರ: ನೌಕರಿ ಕೊಡಿಸುತ್ತೇನೆ ಎಂದು ನಂಬಿಸಿ ವ್ಯಕ್ತಿಯೊಬ್ಬ ತಾಲ್ಲೂಕಿನ 7 ಜನರಿಗೆ ಮೋಸ ಮಾಡಿ ₹8.70 ಲಕ್ಷ ವಂಚಿಸಿದ್ದಾನೆ.

ಈ ಕುರಿತು ಕಳಚೆಯ ಶ್ರೀನಾಥ ಶ್ರೀಕಾಂತ ಕಳಸ ಶನಿವಾರ ಠಾಣೆಯಲ್ಲಿ ದೂರು ದಾಖಲಿಸಿದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಸುಕಾಲಪೇಟೆಯ ನಿವಾಸಿ ಕೆಂಚಪ್ಪ ಗ್ಯಾನಪ್ಪ ಹಂಚಿನಾಳ ಎಂಬಾತ ಜಲಸಂಪನ್ಮೂಲ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ, ಮಾವಿನಮನೆ ಗೋಗದ್ದೆಯ ಗೌರೀಶ ಮೋಹನ ಮರಾಠಾ ಹಾಗೂ ತನ್ನಿಂದ ಒಟ್ಟು ₹3,85,000 ಪಡೆದಿದ್ದಾನೆ.

ಕಳಚೆಯ ರವಿ ತಮ್ಮಣ್ಣ ಗೌಡ, ಅರಬೈಲು ಹೆಗ್ಗಾರಗದ್ದೆಯ ಗಜಾನನ ಈಶ್ವರ ಪಟಗಾರ, ಕಳಚೆಯ ಪ್ರಭಾಕರ ವಿಶ್ವೇಶ್ವರ ಗೌಡ, ತಳಕೆಬೈಲಿನ ಶ್ವೇತಾ ಮರಾಠಿ, ವಜ್ರಳ್ಳಿಯ ರಾಮಚಂದ್ರ ರಾಧಾಕೃಷ್ಣ ಕೋಡ್ಕಣಿಕರ ಅವರಿಂದ ₹4,85,000 ಪಡೆದಿದ್ದಾನೆ. ಹೀಗೆ 7 ಜನರಿಂದ ಒಟ್ಟು ₹8.70ಲಕ್ಷ ಪಡೆದು ಮೋಸ ಮಾಡಿದ್ದಾನೆ. ಆತನ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.