ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಕ್ರಮಣ, ಭೂ ರಹಿತರಿಗೆ ನಿವೇಶನಕ್ಕಾಗಿ ಹೋರಾಟ

Last Updated 6 ಫೆಬ್ರುವರಿ 2012, 8:50 IST
ಅಕ್ಷರ ಗಾತ್ರ

ದಾಂಡೇಲಿ: ನಗರದ ಅತಿಕ್ರಮಣ ನಿವೇಶನದಲ್ಲಿ ವಾಸಿಸುತ್ತಿರುವವರಿಗೆ ಮಾಲೀಕತ್ವ, ಪ್ರವಾಸೋಧ್ಯಮ ಅಭಿ ವೃದ್ಧಿ ಮೂಲಕ ಸ್ಥಳೀಯರಿಗೆ ಉದ್ಯೋಗ ಅವಕಾಶ ಹಾಗೂ ಭೂರಹಿತರಿಗೆ ನಿವೇಶನವನ್ನು ನೀಡಬೇಕೆಂಬ ಬೇಡಿಕೆ ಗಾಗಿ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಂಘಟಿತ ಹೋರಾಟ ವನ್ನು ಕರಪತ್ರ ಹಂಚುವ ಮೂಲಕ ಆರಂಭಿಸಲಾಗುವುದು ಎಂದು ಹರೀಶ ನಾಯ್ಕ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತ ನಾಡಿದ ಅವರು ಸರ್ಕಾರದ ಆದೇಶ ಸಂಖ್ಯೆ ಎ.ಎ.ಪಿ.60-ಡಿ ಎಸ್‌ಟಿ 57 ಬಂಗಳೂರು ದಿನಾಂಕ 18-05- 1962ರ ಪ್ರಕಾರ 1,127 ಎಕರೆ 34ಗುಂಟೆ ವಿವಿಧ ಸರ್ವೆ ನಂಬರುಗಳ ಅರಣ್ಯ ಭೂಮಿಯನ್ನು ಡಿಸ್‌ಫಾರೆಸ್ಟ್ ಎಂದು ಘೋಷಿಸಿ ಆಜಮೀನನ್ನು ಕಾಯ್ದಿ ರಿಸಿದ ಅರಣ್ಯದಿಂದ ಬೇರ್ಪಡಿಸಿ ಉದ್ದಿಮೆ, ವೆಸ್ಟ್ ನರ್ಸರಿ ಅರಣ್ಯ ಇಲಾ ಖೆಯ ಬಂಗಲೆ, ಟಿ.ಬರ್ ಯಾರ್ಡ್, ಇವುಗಳನ್ನು ಒಳಗೊಂಡಂತೆ ನಗರಾಡ ಳಿತಕ್ಕೆ ಒಳಪಡಿಸಿತ್ತು.

ಎರಡುಬಾರಿ ಎಡಪಕ್ಷದ ಕೌನ್ಸಿಲ್ ನಗರದಲ್ಲಿ ಆಡಳಿತ ನಡೆಸಿದಾಗ ಸಿಟಿ ಸರ್ವೆಗಾಗಿ ಠರಾವು ಮಾಡಿ ಸರಕಾರಕ್ಕೆ ಕಳುಹಿಸಲಾಗಿತ್ತು. ಅದು ಈಗ ಜಾರಿಯಾಗಿದೆಯಾದರೂ ಪೂರ್ಣ ಪ್ರಮಾಣದ ಕೆಲಸವಾಗಿಲ್ಲ ಎಂದರು. ಆದ್ದರಿಂದ ನಗರಸಭೆಯವರು ವಿವಿಧ ಅಳತೆಯ ನಿವೇಶನ ಮಾಡಿ ನ್ಯಾಯಯುತ ಬೆಲೆಗೆ ನೈಜ ಫಲಾನು ಭವಿಗಳಿಗೆ ಹಂಚುವ ಕ್ರಮ ಕೈಗೊಳ್ಳ ಬೇಕು.
 
ಹಾಗೂ ಈಗಾಗಲೇ ಅತಿಕ್ರಮಣ ಮಾಡಿಕೊಂಡು ವಾಸಿಸುತ್ತಿರುವ ನಾಗರಿಕರಿಗೆ ಅವರ ನಿವೇಶನಗಳನ್ನೇ ಸಕ್ರಮಗೊಳಿಸಿ ನಿವೇಶನದ ಹಕ್ಕುಗಳನ್ನು ನೊಂದಾವಣೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ತಿಳಿಸಿದರು.

ಇನ್ನು ಅನೇಕ ವಿಚಾರಗಳ ಕುರಿತು ಹಂತಹಂತವಾಗಿ ಹೋರಾಟ ರೂಪಿಸು ವುದಾಗಿ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಸಂಘಟನೆಯ ಸಂಚಾಲಕ ಡಿ.ಸ್ಯಾಮಸನ್, ಮಜೀದ್ ಸನದಿ, ಬಾಬಾಸಾಬ ಜಮಾದಾರ, ರಾಜಾಸಾಬ ಕೇಸನೂರ, ರಮೇಶ ಕಲ ಭಾಗ, ಡಿ.ಎಸ್.ಕಲ್ಗುಟಕರ ಮುಂತಾ ದವರು ಉಪಸ್ಥಿತರಿದ್ದರು.

ಶೇಕಡಾ ನೂರರಷ್ಟು ಫಲಿತಾಂಶ:  ಕೆನರಾ ವೆಲ್‌ಫೇರ್ ಟ್ರಸ್ಟಿನ ಸ್ಥಳೀಯ ಶಿಕ್ಷಣ ಮಹಾವಿದ್ಯಾಲಯ 2010- 11ನೇ ಸಾಲಿನ ಪರೀಕ್ಷೆಯಲ್ಲಿ ಪ್ರತಿಶತ 100ರಷ್ಟು ಫಲಿತಾಂಶವನ್ನು ಪಡೆದು ಸಾಧನೆ ಗೈದಿದೆ.

ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಮುಫೀದಾ ಇನಾಮದಾರ, 81.33% ರಷ್ಟು ಫಲಿತಾಂಶವನ್ನು ಪಡೆದು ಮಹಾ ವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆ ದಿದ್ದಾಳೆ. ಸಂಸ್ಥೆಯ ಶೈಕ್ಷಣಿಕ ಸಾಧನೆಗೆ ಟ್ರಸ್ಟಿನ ಅಧ್ಯಕ್ಷರಾದ ಎಸ್.ಪಿ.ಕಾಮತ್, ಆಡಳಿತಾಧಿಕಾರಿಗಳಾದ ಕೆ.ವಿ.ಶೆಟ್ಟಿ, ಕಾಲೇಜಿನ ಸಂಯೋಜಕರಾದ ಪ್ರಾಚಾರ್ಯ ಎಂ.ಎಸ್.ಲಮಾಣಿ ಹಾಗೂ ಪ್ರಾಚಾರ್ಯೆ ಜಯಶ್ರೀ ಕೊರಟಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಜೆ.ಡಿ.ಎಸ್ ಸೇರ್ಪಡೆ: ಜೋಯಿಡಾ ತಾಲೂಕಿನ ಅವೇಡಾ ಗ್ರಾಮ ಪಂಚಾ ಯಿತಿಯ ಮತ್ತಿಬ್ಬರು ಕಾಂಗ್ರೆಸ್ ಬೆಂಬ ಲಿತ ಸದಸ್ಯರು ಜೆ.ಡಿ.ಎಸ್ ಸೇರ್ಪಡೆ ಗೊಂಡಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಬೆಂಬಲಿತ ಅವೇಡಾ ಪಂಚಾ ಯತ್ ಅಧ್ಯಕ್ಷ ರಾಜೇಂದ್ರ ಆಯಕರ, ಸದಸ್ಯರಾದ ಯಶೋದ ವರ್ಕನಳ್ಳಿ, ಶೋಭಾ ತಳವಾರ, ಕಸ್ತೂರಿ ಗುಡಿ ಈ ನಾಲ್ವರು ಸದಸಯರು ಜೆ.ಡಿ.ಎಸ್. ಸೇರ್ಪಡೆಯಾಗಿ ಕಾಂಗ್ರೆಸ್ ಹಿಡಿತದಲ್ಲಿದ್ದ ಗ್ರಾಮ ಪಂಚಾಯಿತಿಯನ್ನು ಜೆಡಿ.ಎಸ್ ಹಿಡಿತಕ್ಕೆ ತಂದಿದ್ದರು. ಇದೀಗ ಮತ್ತಿ ಬ್ಬರು ಕಾಂಗ್ರೆಸ್ ಸದಸ್ಯರಾದ ಬಾಲೇ ಸಾಬ ನದಾಫ್, ಹಾಗೂ ಮಂಜುಳಾ ನಾಯರ್ ಅವರು ಜೆ.ಡಿ.ಎಸ್. ಸೇರ್ಪಡೆ ಯಾಗುವ ಮೂಲಕ ಪಂಚಾಯತದಲ್ಲಿ ತಮ್ಮ ಬಲವನ್ನು  ಜೆ.ಡಿ.ಎಸ್.ಹೆಚ್ಚಿಸಿ ಕೊಂಡಂತಾಗಿದೆ.
ಶಾಸಕ ಸುನೀಲ ಹೆಗಡೆ ಪಾದಯಾ ತ್ರೆಯ ಆರಂಭದಲ್ಲಿ ಮೌಳಂಗಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಈ ಈರ್ವರು ಸದಸ್ಯರು ಶಾಸಕ ಸುನೀಲ ಹೆಗಡೆ ಉಪಸ್ಥಿತಿಯಲ್ಲಿ ಜೆ.ಡಿ.ಎಸ್‌ನ್ನು ಸೇರ್ಪಡೆಗೊಂಡರು.
 
ವಿಧಾನ ಪರಿಷತ್ ಮಾಜಿ ಸದಸ್ಯರಾದ ವಿ.ಡಿ.ಹೆಗಡೆ, ಜೆ.ಡಿ.ಎಸ್.ಜೋಯಿಡಾ ಘಟಕದ ಅಧ್ಯಕ್ಷ ತುಕಾರಾಮ ಮಾಂಜರೇಕರ, ದಾಂಡೇಲಿ ಘಟಕದ ಅಧ್ಯಕ್ಷ ಟಿ.ಆರ್. ಚಂದ್ರಶೇಖರ, ಸುವರ್ಣ  ಮುಂತಾದ ವರು ಬರಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT