ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುರ್ವೇದ ಸಸ್ಯಾಭಿವೃದ್ಧಿಗೆ ಮನವಿ

Last Updated 10 ಅಕ್ಟೋಬರ್ 2011, 5:30 IST
ಅಕ್ಷರ ಗಾತ್ರ

ಕುಮಟಾ: ಜಗತ್ತಿನಾದ್ಯಂತ ಆಯುರ್ವೇದ ವೈದ್ಯ ಪದ್ಧತಿಗೆ ಹೆಚ್ಚೆಚ್ಚು ಬೇಡಿಕೆ ಲಭಿಸುತ್ತಿರುವ ಈ ದಿನಗಳಲ್ಲಿ ಜಿಲ್ಲೆಯಲ್ಲಿ ಆಯುರ್ವೇದ ಸಸ್ಯಗಳನ್ನು ಬೆಳೆಯಲು ಸರಕಾರ ಒಂದು ಸಾವಿರ ಎಕರೆ ಜಾಗವನ್ನು ಮೀಸಲಿಡಬೇಕು ಎಂದು ಹಿರಿಯ ಪತ್ರಕರ್ತ ಜಿ.ಯು. ಭಟ್ಟ ಆಗ್ರಹಿಸಿದರು.

ಕುಮಟಾದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಆಯುರ್ವೇದ ವೈದ್ಯ ಡಾ. ಎಂ.ಎಸ್. ಅವಧಾನಿ ಅವರ ` ವೈದ್ಯಲೋಕ ವೀಕ್ಷಣೆ~ ಪುಸ್ತಕ ಬಿಡುಗಡೆ ಮಾಡಿದ ಅವರು, ` ಜಗತ್ತಿನಲ್ಲಿ ಯಾವುದೇ ಸಂಸ್ಕೃತಿ, ಪರಂಪರೆ, ನಾಗರಿಕತೆ ಉಳಿಯುವುದು ಮುದ್ರಿತ ಅಕ್ಷರಗಳಿಂದ. ವೈದ್ಯಕೀಯ ಮಾಹಿತಿಯನ್ನು ಆತ್ಮೀಯ ಭಾಷೆ ಯಿಂದ ದಾಖಲಿಸಿದ ಡಾ. ಎಂ.ಎಸ್. ಅವಧಾನಿ ಅವರ ಪುಸ್ತಕ ಎಲ್ಲರ ಮನೆ, ಶಾಲೆಗಳ ಗ್ರಂಥಾಲಯಯಗಳಲ್ಲಿ ಇರ ಬೇಕಾದ ವ್ಯವಸ್ಥೆ ಆಗಬೇಕು. ತಂಬಾಕು ಇಲ್ಲದೆ 14 ರೀತಿಯ ಆಯುರ್ವೇದ ಸಸ್ಯಗಳನ್ನು ಬಳಸಿ ನಶ್ಯ ತಯಾರಿಸುವ ಕಲೆ ಆಯುರ್ವೇದ ವೈದ್ಯಪದ್ಧತಿ ಅನು ಸರಿಸುತ್ತಿರುವ ಶಿರಸಿಯ ಪಟುವರ್ಧನ ಕುಟುಂಬದಲ್ಲಿ ಇಂದಿಗೂ ಪ್ರಸಿದ್ಧ. ಇಂಥ ಪದ್ಧತಿಯನ್ನು ಉಳಿಸಿಕೊಂಡು ಹೋಗುವ ಉದ್ದೇಶದಿಂದ ಜಿಲ್ಲೆಯ ಆಯುರ್ವೇದ ತಜ್ಞರಿಗೆ ಸ್ಥಳೀಯವಾಗಿ ಔಷಧಿ ಸಸ್ಯಗಳು ಲಭ್ಯವಾಗುವಂತೆ ನೋಡಿಕೊಳ್ಳುವ ವ್ಯವಸ್ಥೆ ಆಗ ಬೇಕಾಗಿದೆ~ ಎಂದರು.

ಖ್ಯಾತ ಸ್ತ್ರೀ ರೋಗ ತಜ್ಞ ಡಾ. ಟಿ.ಎನ್. ಹೆಗಡೆ, ` ಆಲೋಪಥಿ ವೈದ್ಯ ಪದ್ಧತಿಯಲ್ಲಿ ನಿವಾರಿಸಲಾಗದ ಅನೇಕ ಸಮಸ್ಯೆಗಳನ್ನು ಡಾ. ಎಂ.ಎಸ್. ಅವಧಾನಿಯಂಥವರು ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಗುಡಣಪಡಿಸಿ ್ದದನ್ನು ಕಣ್ಣಾರೆ ಕಂಡಿದ್ದೇನೆ~ ಎಂದರು. ಡಾ. ವಿಶ್ವನಾಥ ಹೆಗಡೆ, ಕೃತಿ ಪ್ರಕಾಶಕ ಹಾಗೂ ಪತ್ರಕರ್ತ  ಹೊನ್ನಾವರದ ಕೃಷ್ಣಮೂರ್ತಿ ಹೆಗಡೆ ಮಾತನಾಡಿದರು. ಡಾ. ಸುರೇಶ ಹೆಗಡೆ ಅಧ್ಯಕ್ಷತೆ ವಹಿಸಿದ್ದರು.
ಡಾ. ಎಂ.ಎಸ್. ಅವಧಾನಿ, ರವಿ ಕಿರಣ ಪಟುವರ್ಧನ ಹಾಗೂ ಪ್ರಶಾಂತ ಭಾಗ್ವತ ವೇದಿಕೆಯಲ್ಲಿದ್ದರು.

ಎಸ್.ಪಿ .ಭಟ್ಟ ನಿರೂಪಿಸಿದರು. ಪ್ರಸನ್ನ ಭಟ್ಟ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಅವಧಾನಿ ಶಾನಭೊಗ, ಕಾರ್ಮಿಕ ಮುಖಂಡ ಸಿ.ಆರ್. ನಾಯ್ಕ, ಶಿರಸ್ತೇದಾರ ವಿ.ಆರ್. ನಾಯ್ಕ, ಜಯಂತ ಪಟಗಾರ, ರೋಟರಿ ಕಾರ್ಯದರ್ಶಿ ಸುರೇಶ ಭಟ್ಟ, ಕುಂಭೇಶ್ವರ ದೇವಾಲಯ ಅರ್ಚಕರಾದ ವಿಶ್ವೇಶ್ವರ ಭಟ್ಟ ಮೊದಲಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT