ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿ: ದಡಕ್ಕೆ ಮರಳಿದ ದೋಣಿಗಳು

Last Updated 10 ಫೆಬ್ರುವರಿ 2012, 6:25 IST
ಅಕ್ಷರ ಗಾತ್ರ

ಕಾರವಾರ: ಹವಾಮಾನ ವೈಪರಿತ್ಯ ದಿಂದಾಗಿ ಅರಬ್ಬಿ ಸಮುದ್ರದಲ್ಲಿ ಬಲ ವಾದ ಗಾಳಿ ಬೀಸುತ್ತಿದ್ದರಿಂದ ಕಡಲ ಆರ್ಭಟ ಹೆಚ್ಚಿದ್ದು ಆಳ ಸಮುದ್ರ ಮೀನುಗಾರಿಕೆ ದೋಣಿಗಳು ಗುರು ವಾರ ತೀರ ಪ್ರದೇಶಕ್ಕೆ ಬಂದು ಲಂಗರು ಹಾಕಿವೆ.

ಮೀನುಗಾರಿಕೆ ಚಟುವಟಿಕೆಯನ್ನು ಸ್ಥಗಿತಗೊಳಿಸಿ ಆಳ ಸಮುದ್ರದಲ್ಲಿ ಲಂಗರು ಹಾಕಿದ್ದರೂ ಆಳೆತ್ತರದ ಅಲೆಗಳು ಏಳುತ್ತಿರುವುದರಿಂದ ದೋಣಿಗಳಲ್ಲಿ ನಿಂತುಕೊಳ್ಳಲು ಸಾಧ್ಯ ವಾಗುತ್ತಿಲ್ಲವಾದ್ದರಿಂದ ಮಂಜುಗಡ್ಡೆ ಸಂಗ್ರಹ ಮಾಡಿಕೊಂಡು ಆಳ ಸಮುದ ದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಕೇರಳ, ಗೋವಾ, ಮಂಗಳೂರು, ಮಲ್ಪೆ ಮೀನುಗಾರಿಕೆ ಬಂದರಿನ ನೂರಾರು ದೋಣಿಗಳು ಇಲ್ಲಿಗೆ ಆಗಮಿ ಸಿವೆ.

ಅಮಾವಾಸ್ಯೆಯ ಮಾರನೇ ದಿನದಿಂದಲೇ ಅರಬ್ಬಿ ಸಮುದ್ರದ ವಾತಾವರಣದಲ್ಲಿ ಬದಲಾವಣೆ ಆಗಿತ್ತು. ಉಬ್ಬರದ ಸಂದರ್ಭದಲ್ಲಿ ದೊಡ್ಡದೊಡ್ಡ ಅಲೆಗಳು ಏಳುತ್ತಿ ರುವುದರಿಂದ ಜಿಲ್ಲೆಯ ಕೆಲವು ಕಡೆಗಳಲ್ಲಿ ನೀರು ತೀರ ಪ್ರದೇಶಕ್ಕೆ ನೀರು ನುಗ್ಗಿದೆ.

`ಮಂಗಳೂರಿನಿಂದ ಮಂಜುಗಡ್ಡೆ ಸಂಗ್ರಹ ಮಾಡಿಕೊಂಡು ಎರಡು ದಿನದ ಹಿಂದಷ್ಟೇ ಮೀನುಗಾರಿಕೆ ತೆರಳಿದ್ದೇವು. ಬಲವಾದ ಗಾಳಿ ಬೀಸುತ್ತಿದ್ದರಿಂದ ಮೀನುಗಾರಿಕೆ ನಡೆಸಲು ಸಾಧ್ಯವಾಗದೆ ದಡಕ್ಕೆ ಬರಬೇಕಾಯಿತು. ಕಡಲ ಆರ್ಭಟ ಕ್ಷೀಣಿಸಿದ ನಂತರ ಮರಳು ತ್ತೇವೆ~ ಎಂದು ಆಳ ಸಮುದ್ರ ಮೀನು ಗಾರಿಕೆ ದೋಣಿಯ ಕಾರ್ಮಿಕರಾದ ಗಣಪತಿ ಹರಿಕಂತ್ರ ಮತ್ತು ಈಶ್ವರ ಹರಿಕಂತ್ರ `ಪ್ರಜಾವಾಣಿ~ಗೆ ತಿಳಿಸಿದರು.

`ಗಾಳಿ ಎಂದಿನಂತೆ ಬೀಸುತ್ತಿದೆ. ಇಂದು ಗರಿಷ್ಠ 33.6 ಮತ್ತು ಕನಿಷ್ಠ 19.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಹವಾಮಾನದ ಬಗ್ಗೆ ಯಾವುದೇ ಮುನ್ಸೂಚನೆ ಇಲ್ಲ~ ಎಂದು ಹವಾಮಾನ ಇಲಾಖೆಯ ಅಧಿಕಾರಿ ಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT