ಹೊಸಪೇಟೆ(ವಿಜಯನಗರ): ‘ದಸರಾ ಒಳಗೊಂಡಂತೆ ಸರ್ಕಾರ ಆಯೋಜಿಸುವ ಯಾವುದೇ ಉತ್ಸವಗಳಲ್ಲಿ ನಾನು ನನ್ನ ಕವಿತೆ ಓದಲಾರೆ’ ಎಂದು ಕವಿ ಬಿ.ಪೀರ್ ಬಾಷಾ ತಿಳಿಸಿದ್ದಾರೆ.

ಹಂಪಿ ಉತ್ಸವದ ಕವಿಗೋಷ್ಠಿಯಲ್ಲಿ ನನ್ನ ಹೆಸರಿರುವುದನ್ನು ಗಮನಿಸಿದ್ದೇನೆ. ನಿನ್ನೆ ರಾತ್ರಿಯಷ್ಟೆ ಆಯೋಜಕರು ನನಗೆ ಆಹ್ವಾನಿಸಿದ್ದರು. ನಾನು ಈ ಆಹ್ವಾನವನ್ನು ನಿರಾಕರಿಸಿದ್ದೇನೆ. ಮುದ್ರಣಕ್ಕೆ ಹೋದ ಬಳಿಕ ಒಪ್ಪಿಗೆ ಕೇಳಿರಬಹುದು ಎನಿಸುತ್ತಿದೆ. ಇದು ಸರಿಯಲ್ಲ. ಎರಡನೆ ಸಲ ಹೀಗಾಗುತ್ತಿದೆ ಎಂದಿದ್ದಾರೆ.

ಇಂತಹ ಉತ್ಸವಗಳ ಬಗ್ಗೆ ನನ್ನ ವಿರೋಧವಿದೆ. ಒಬ್ಬ ಜನತಂತ್ರವಾದಿಯಾಗಿ ಇಂತಹ ಉತ್ಸವಗಳನ್ನು ಒಪ್ಪಲಾರೆ. ಉತ್ಸವಗಳ ಹೆಸರಿನಲ್ಲಿ ನಡೆವ ಕೋಟ್ಯಂತರ ರೂಪಾಯಿಗಳ ದುರ್ವವ್ಯಹಾರದ ತಿಳಿವಳಿಕೆ ನನಗಿದೆ. ಈ ಉತ್ಸವ ಕೂಟಗಳಲ್ಲಿ ಭಾಗವಹಿಸುವ ಮೂಲಕ ಅಂತಹದ್ದಕ್ಕೆ ಪರೋಕ್ಷ ಸಮ್ಮತಿ ನೀಡುವ ಅಥವಾ ಅಂತಹ ಪಾಪದಲ್ಲಿ ಪಾಲ್ಗೊಳ್ಳುವ ಕವಿ ನಾನಾಗಲಾರೆ. ನನ್ನ ಅಸಮ್ಮತಿಯ ನಂತರವೂ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಪ್ರಕಟವಾಗಿದೆ. ಹಂಪಿ ಉತ್ಸವದ ಕವಿಗೋಷ್ಠಿಯಲ್ಲಿ ನಾನು ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.