ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಸಕಾಲಕ್ಕೆ ದಾಖಲೆ ಒದಗಿಸಲು ಆಗ್ರಹ

Last Updated 14 ಸೆಪ್ಟೆಂಬರ್ 2021, 10:35 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಿವೇಶನ, ಮನೆಗೆ ಸಂಬಂಧಿಸಿದಂತೆ ನಗರಸಭೆ ಸಕಾಲಕ್ಕೆ ದಾಖಲೆ ಕೊಡಬೇಕೆಂದು ವಿಜಯನಗರ ನಾಗರಿಕ ವೇದಿಕೆ, ವಿನಾಯಕ ನಗರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟ ಆಗ್ರಹಿಸಿದೆ.

ಈ ಸಂಬಂಧ ಸಂಘಟನೆಗಳ ಮುಖಂಡರು ಮಂಗಳವಾರ ನಗರದಲ್ಲಿ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.

ನಗರಸಭೆ ಯಾರೊಂದಿಗೂ ಚರ್ಚಿಸದೇ ಏಕಾಏಕಿ ಆಸ್ತಿ ತೆರಿಗೆಯನ್ನು ಹೆಚ್ಚಿಸಿದೆ. ಆದರೆ, ನಾಗರಿಕರ ಮ್ಯುಟೇಶನ್‌, ಫಾರಂ ನಂಬರ್‌ 3 ಸಕಾಲಕ್ಕೆ ಕೊಡುತ್ತಿಲ್ಲ. ನಿವೇಶನ ಖರೀದಿ, ಮಾರಾಟ, ಮನೆ ನಿರ್ಮಾಣಕ್ಕೆ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ನಗರಸಭೆ ವಿರುದ್ಧ ಸಾರ್ವಜನಿಕರು ತೀವ್ರ ಬೇಸರಗೊಂಡಿದ್ದಾರೆ ಎಂದು ತಿಳಿಸಿದರು.

2000ನೇ ಇಸ್ವಿಯಲ್ಲಿ ಕೃಷಿ ಜಮೀನಿಗೆ ಸಂಬಂಧಿಸಿದ ಪಹಣಿ ಸೇರಿದಂತೆ ಇತರೆ ದಾಖಲೆಗಳನ್ನು ಪಡೆಯಲು ಉತ್ತಮ ವ್ಯವಸ್ಥೆ ಜಾರಿಗೆ ತರಲಾಗಿದೆ. ಅದೇ ಮಾದರಿಯ ವ್ಯವಸ್ಥೆ ನಗರಸಭೆಯಲ್ಲೂ ಜಾರಿಗೆ ತರಬೇಕು ಎಂದು ಹಕ್ಕೊತ್ತಾಯ ಮಾಡಿದರು.

ಮುಖಂಡರಾದ ವೈ. ಯಮುನೇಶ್‌, ಯು.ಆಂಜನೇಯಲು, ಎಚ್.ತಿಪ್ಪೇಸ್ವಾಮಿ, ಯು.ಅಶ್ವತ್ಥಪ್ಪ, ಸಣ್ಣ ಮಾರೆಪ್ಪ, ಬಿ.ಜಹಾಂಗೀರ್, ಮಹೇಶ್ ಮಾಚಲ್, ಕಾಶಿ ವಿಶ್ವನಾಥ, ಬುದ್ದಿ ರಾಮಕೃಷ್ಣ, ಯು.ಯಂಕಪ್ಪ, ಶೇಕ್‌ ಮೆಹಬೂಬ್ ಬಾಷ, ಕೆ.ವೀರೇಶ್, ಜಿ.ಸೋಮಣ್ಣ, ಮಧುಸೂದನ್, ನಜೀರ್ ಸಾಬ್, ಎಂ.ಬಸವರಾಜ್, ಕುಬೇರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT