ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಢೀರ್‌ ಹೂವಿನ ಮಾರುಕಟ್ಟೆ ಬಂದ್‌

Last Updated 17 ಮೇ 2021, 11:00 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹೆಚ್ಚಿನ ಜನ ಸೇರುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸೋಮವಾರ ನಗರದ ಗಾಂಧಿ ವೃತ್ತ ಬಳಿಯ ಹೂವಿನ ಮಾರುಕಟ್ಟೆಯನ್ನು ಪೊಲೀಸರು, ನಗರಸಭೆ ಸಿಬ್ಬಂದಿ ದಿಢೀರ್‌ ಬಂದ್‌ ಮಾಡಿಸಿದರು.

ಆಗಷ್ಟೇ ಮಳಿಗೆ ಬಾಗಿಲು ತೆರೆದು ಹೂ, ಹೂವಿನ ಮಾಲೆ ಮಾರಾಟಕ್ಕೆ ವ್ಯಾಪಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಯಾವುದೇ ಮುನ್ಸೂಚನೆ ನೀಡದೆ ಸ್ಥಳಕ್ಕೆ ಬಂದ ಪೊಲೀಸರು, ಮಳಿಗೆಗಳನ್ನು ಮುಚ್ಚಿಸಿದರು. ಕೆಲವರು ಹೂಗಳೊಂದಿಗೆ ಅಲ್ಲಿಂದ ನಿರ್ಗಮಿಸಿದರು. ಮನೆಗೆ ಕೊಂಡೊಯ್ದರು ಯಾರು ಬರುವುದಿಲ್ಲ. ಅಲ್ಲೂ ಹಾಳಾಗುತ್ತವೆ ಎಂದು ಮಳಿಗೆಯಲ್ಲೇ ಬಿಟ್ಟು ತೆರಳಿದರು.

‘ತರಕಾರಿ, ಹಣ್ಣಿನ ವ್ಯಾಪಾರಿಗಳಂತೆ ಹೂವಿನ ವ್ಯಾಪಾರಿಗಳೆಲ್ಲರೂ ಬೆಳಿಗ್ಗೆ ಆರರಿಂದ ಹತ್ತು ಗಂಟೆಯ ವರೆಗೆ ವ್ಯಾಪಾರ ಮಾಡುತ್ತಿದ್ದಾರೆ. ಯಾರೂ ಜನರನ್ನು ಸೇರಿಸಿಕೊಳ್ಳುತ್ತಿಲ್ಲ. ನಿಯಮ ಪಾಲಿಸಿಯೇ ಮಾರಾಟ ಮಾಡುತ್ತಿದ್ದಾರೆ. ಆದರೆ, ಇಂದಿನಿಂದ ಮಳಿಗೆ ತೆರೆಯಬಾರದು ಎಂದು ಹೇಳಿದ್ದಾರೆ. ವ್ಯಾಪಾರವಿಲ್ಲದೆ ಹೊಟ್ಟೆ ತುಂಬಿಸಿಕೊಳ್ಳುವುದು ಹೇಗೆ?’ ಎಂದು ವ್ಯಾಪಾರಿ ಪ್ರಶಾಂತ್‌ ಪ್ರಶ್ನಿಸಿದ್ದಾರೆ.

‘ಮಳಿಗೆ ತೆರೆದು ಹೂ ಮಾರಾಟಕ್ಕೆ ಅವಕಾಶ ಇಲ್ಲ. ಬೇಕಿದ್ದರೆ ಅವರು ತಳ್ಳುಗಾಡಿಗಳಲ್ಲಿ ಮಾರಾಟ ಮಾಡಬಹುದು. ಮೇಲಧಿಕಾರಿಗಳ ಸೂಚನೆ ಪ್ರಕಾರ ಬಂದ್‌ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT