ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ, ಕಾನ್‌ಸ್ಟೆಬಲ್‌ ಹುದ್ದೆ ಪರೀಕ್ಷೆ; 3 ತಿಂಗಳು ಉಚಿತ ತರಬೇತಿ

Last Updated 20 ಜುಲೈ 2021, 12:28 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಧಾರವಾಡದ ಚಾಣಕ್ಯ ಕರಿಯರ್‌ ಅಕಾಡೆಮಿಯು ಪಿಎಸ್‌ಐ, ಕಾನ್‌ಸ್ಟೆಬಲ್‌ ಹುದ್ದೆ ಪರೀಕ್ಷೆಗಳಿಗೆ ನಗರದಲ್ಲಿ ಉಚಿತ ತರಬೇತಿ ನೀಡಲು ನಿರ್ಧರಿಸಿದೆ.

‘ತರಬೇತಿ ಪಡೆಯ ಬಯಸುವವರು ಮಂಗಳವಾರದಿಂದ (ಜು.20) ಜು. 29ರ ವರೆಗೆ ಹೆಸರು ನೋಂದಣಿ ಮಾಡಿಸಬೇಕು. ಜು. 30ರಂದು ಬೆಳಿಗ್ಗೆ 10.30ಕ್ಕೆ ಮಾದರಿ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಉತ್ತಮ ಸಾಧನೆ ತೋರಿದ ಆಯ್ದ ನೂರು ವಿದ್ಯಾರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗುತ್ತದೆ’ ಎಂದು ಅಕಾಡೆಮಿಯ ಬಸವರಾಜ ಅಕ್ಕಿ ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮೂರು ತಿಂಗಳು ತರಬೇತಿ ನೀಡಲಾಗುತ್ತದೆ. ಅದು ಸಂಪೂರ್ಣ ಉಚಿತವಾಗಿರುತ್ತದೆ. ಆದರೆ, ವಸತಿ, ಊಟೋಪಚಾರದ ವ್ಯವಸ್ಥೆಯನ್ನು ವಿದ್ಯಾರ್ಥಿಗಳೇ ಮಾಡಿಕೊಳ್ಳಬೇಕು. ಪ್ರತಿದಿನ ಬೆಳಿಗ್ಗೆ 4.30ರಿಂದ 6.30ರ ವರೆಗೆ ದೈಹಿಕ ಕಸರತ್ತು ಹೇಳಿಕೊಡಲಾಗುತ್ತದೆ. ಬೆಳಿಗ್ಗೆ 9ರಿಂದ 1ಗಂಟೆ, ಮಧ್ಯಾಹ್ನ 2ರಿಂದ ಸಂಜೆ 6ರ ವರೆಗೆ ಎರಡು ಬ್ಯಾಚ್‌ಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತದೆ. ಅಕಾಡೆಮಿಯ ಸಂಪನ್ಮೂಲ ವ್ಯಕ್ತಿಗಳು ತರಗತಿಗಳನ್ನು ನಡೆಸಿಕೊಡುತ್ತಾರೆ’ ಎಂದು ಮಾಹಿತಿ ಹಂಚಿಕೊಂಡರು.

‘ಅನೇಕರಿಗೆ ಪಿಎಸ್‌ಐ ಸೇರಿದಂತೆ ಇತರೆ ಹುದ್ದೆಗಳಿಗೆ ಹೋಗಬೇಕೆಂಬ ಆಸೆ ಇರುತ್ತದೆ. ಆದರೆ, ಅದಕ್ಕೆ ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎನ್ನುವುದು ತಿಳಿದಿರುವುದಿಲ್ಲ. ತರಬೇತಿಯ ಅವಧಿಯಲ್ಲಿ ಅದನ್ನು ಹೇಳಿಕೊಡಲಾಗುತ್ತದೆ. ಅಕಾಡೆಮಿಯಲ್ಲಿ ತರಬೇತಿ ಪಡೆದ ಅನೇಕರು ಈಗ ಉನ್ನತ ಹುದ್ದೆಯಲ್ಲಿದ್ದಾರೆ’ ಎಂದು ತಿಳಿಸಿದರು.

‘ಬರುವ ದಿನಗಳಲ್ಲಿ ಯುಪಿಎಸ್‌ಸಿ, ಕೆಎಎಸ್‌, ಎಫ್‌ಡಿಎ, ಎಸ್‌ಡಿಎ, ಪಿಡಿಒ, ಬಿ.ಇಡಿ, ಟಿಇಟಿ ಪರೀಕ್ಷೆ ಕುರಿತ ತರಬೇತಿ ಕೊಡಲಾಗುವುದು’ ಎಂದು ವಿವರಿಸಿದರು.

ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕ ಪ್ರದೀಪ್‌ ಗುಡ್ಡದ್‌, ಮೋಹನ್‌ ರೆಡ್ಡಿ ಗುಡ್ಡದ್‌, ಜಿ. ಮಲ್ಲಿಕಾರ್ಜುನ, ಶಶಿಧರ್‌, ಮಂಜುನಾಥ, ಸುರೇಶ್‌ ವೈ ಇದ್ದರು.

ನೋಂದಣಿಗೆ ಹೀಗೆ ಮಾಡಿ
ತರಬೇತಿ ಪಡೆಯ ಬಯಸುವವರು ಹೆಚ್ಚಿನ ಮಾಹಿತಿಗೆ: 8792828153, 8792828154 ಸಂಪರ್ಕಿಸಬಹುದು ಅಥವಾ ನಗರದ ರೈಲು ನಿಲ್ದಾಣ ರಸ್ತೆಯ ಕೆ.ಆರ್.ಕೆ. ಲಾಡ್ಜ್‌ ಸಮೀಪದ ಚಾಣಕ್ಯ ಕರಿಯರ್‌ ಅಕಾಡೆಮಿ ಕಚೇರಿಗೆ ಭೇಟಿ ನೀಡಬಹುದು. ಹೆಸರು ನೋಂದಣಿಗೆ ಜು. 29 ಕೊನೆ ದಿನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT